ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ಸಿಗಂಧೂರು Sigandhuru ಬಳಿಯ ಶರಾವತಿ ಹಿನ್ನೀರಿಯಲ್ಲಿ 10 ಚಕ್ರದ ಬೃಹತ್ ಲಾರಿಯೊಂದು ಮುಳುಗಿಹೋಗಿದೆ. ನಿನ್ನೆ ಸಂಜೆ 7 ಗಂಟೆ ವೇಳೆಗೆ ಘಟನೆ ನಡೆದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಘಟನೆಗೆ ಕಾರಣವೇನು?
ಅಂಬಾರಗೋಡ್ಲು-ಹೊಳೆಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಖಾಸಗಿ ನಿರ್ಮಾಣ ಕಂಪೆನಿಗೆ ಸೇರಿದ 10 ಚಕ್ರದ ಲಾರಿಯೊಂದು ಜಲ್ಲಿಕಲ್ಲು ತುಂಬಿಕೊಂಡು ಬಂದಿದೆ.
ಲೋಡ್ ಸಮೇತ ಲಾರಿಯನ್ನು ಕಂಪೆನಿಯ ಲಾಂಚ್’ನಲ್ಲಿ ಇಳಿಸಲು ಪ್ರಯತ್ನಿಸಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ನೀರಿಗೆ ಜಾರಿ ಇಳಿದಿದೆ. ತತಕ್ಷಣವೇ ಎಚ್ಚೆತ್ತ ಚಾಲಕ ಕೆಳಕ್ಕೆ ಹಾರಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
Also read: ಶಿವಮೊಗ್ಗದಲ್ಲಿ ಫುಲ್ ಹೆಲ್ಮೆಟ್‌ಗೆ ಹೆಚ್ಚಿದ ಬೇಡಿಕೆ | ಖರೀದಿಗೆ ಮುಗಿಬಿದ್ದ ಜನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post