ಕಲ್ಪ ಮೀಡಿಯಾ ಹೌಸ್ | ಆನಂದಪುರಂ |
ಜಿಲ್ಲಾ ಕೇಂದ್ರ ಶಿವಮೊಗ್ಗ #Shivamogga ಸೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಉತ್ತಮ ಮಳೆಯಾಗಿದ್ದು, ಹೊಸಗುಂದ #Shivamogga ಉಮಾಮಹೇಶ್ವರ ದೇವಾಲಯದ ಪರಿಸರದಲ್ಲಿ ಮಾತ್ರ ವರುಣ ಪವಾಡವನ್ನೇ ಸೃಷ್ಠಿಸಿದ್ದಾನೆ ಎಂಬ ವಾತಾವರಣ ಇಂದು ಸಂಜೆ ನಿರ್ಮಾಣವಾಗಿತ್ತು.
ಸಾಗರ, #Sagar ಆನಂದಪುರಂ ಸೇರಿದಂತೆ ಹಲವು ಕಡೆಗಳಲ್ಲಿ ಇಂದು ಸಂಜೆ 7 ಗಂಟೆ ವೇಳೆಗೆ ಮಳೆ ಆರಂಭವಾಗಿದ್ದು, 8 ಗಂಟೆ ವೇಳೆಗೆಲ್ಲಾ ನಿಂತು ಹೋಗಿದೆ.
ಆದರೆ, ಇದಕ್ಕೂ ಮೊದಲು ಹೊಸಗುಂದದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಪರಿಸರದಲ್ಲಿ ಮಾತ್ರ ಮಳೆಯ ಆರ್ಭಟ ಹೆಚ್ಚಾಗಿತ್ತು. ವಿಶೇಷ ಎಂದರೆ ದೇವಾಲಯದ ಪರಿಸರ ಹೊರತಾಗಿ ಸುತ್ತಮುತ್ತಲೆಲ್ಲೂ ಮಳೆ #Rain ಇರಲಿಲ್ಲ. ದೇವಾಲಯಕ್ಕೆಂದೇ ಮಳೆ ಸುರಿಯುತ್ತಿದೆ ಎಂಬಂತೆ ವರುಣ ಅಬ್ಬರಿಸಿದ.
ಇದೇ 18ರ ಗುರುವಾರದಂದು ಶ್ರೀ ಉಮಾಮಹೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀಆಂಜನೇಯ ಸ್ವಾಮಿಯ ಬಾಲಾಲಯ ಪ್ರತಿಷ್ಠಾ ಮಹೋತ್ಸವವನ್ನು ಶೃಂಗೇರಿ #Sringeri ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ.
ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಶೃಂಗೇರಿ ಶ್ರೀಮಠದ ಪ್ರತಿನಿಧಿ ವಿದ್ಯಾಶಂಕರ್ ಅವರು ಪರಿಶೀಲನೆಗಾಗಿ ದೇವಾಲಯಕ್ಕೆ ಆಗಮಿಸಿದ್ದರು. ಶೃಂಗೇರಿ ಮಠದ ಪ್ರತಿನಿಧಿಗಳು ಹೊಸಗುಂದಕ್ಕೆ ಕಾಲಿಡುತ್ತಿದ್ದಂತೆಯೇ ವರುಣನ ಸಿಂಚನವಾಗಿ ಭೂಮಿಯಲ್ಲಿ ಹಿತವಾದ ಮಣ್ಣಿನ ಕಂಪು ಹಾಗೂ ದೇವಾಲಯದ ಸುತ್ತ ಮುತ್ತ ತಂಪಾದ ತಂಗಾಳಿಯ ವಾತಾವರಣ ನಿರ್ಮಾಣವಾಗಿತ್ತು.
ದೇವಾಲಯದ ಆವರಣದಲ್ಲಿ ಮಾತ್ರ ಆರಂಭದಲ್ಲಿ ಮಳೆ ಸುರಿದಿದ್ದು, ವೀಡಿಯೋದಲ್ಲಿ ದಾಖಲಾಗಿದ್ದು, ಇದು ಒಂದು ಪವಾಡವೇ ಸರಿ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
(ಮಾಹಿತಿ: ಅನಂತ ಕಲ್ಲಾಪುರ, ತೀರ್ಥಹಳ್ಳಿ)
Discussion about this post