ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದ ಶ್ರೀನಗರದಲ್ಲಿ 46ನೇ ವರ್ಷದ ಗಣೇಶ ವಿಸರ್ಜನೆ ಗುರುವಾರ ಅದ್ದೂರಿಯಾಗಿ ನಡೆಯಿತು.
ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿಯವರು ಕಳೆದ ಭಾನುವಾರ ಗಣಹೋಮ , ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆ ನಡೆಸಿಕೊಟ್ಟರು.

ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನ ಕಳೆದ 2 ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಅದ್ದೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನ ಸಾರ್ವಜನಿಕರು ಕಣ್ತುಂಬಿಕೊಂಡರು.
ನಗರದ ಹೃದಯಭಾಗ ಸಾಗರ ಹೋಟೆಲ್ ಸರ್ಕಲ್ ಹಾಗೂ ಪೋಲಿಸ್ ಸ್ಟೇಷನ್ ಸರ್ಕಲ್ ನಲ್ಲಿ ಹಲವು ಜನ ಬೆಂಕಿಯಾಟ ಪ್ರದರ್ಶನವನ್ನು ವೀಕ್ಷಿಸಿದರು.

Also read: ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಸಂಜನಾ ಸಾಧನೆ: ಗಣ್ಯರ ಪ್ರಶಂಸೆ










Discussion about this post