ಕಲ್ಪ ಮೀಡಿಯಾ ಹೌಸ್ | ಸಾಗರ |
2020-21ನೆಯ ಸಾಲಿನ ರಾಷ್ಟ್ರೀಯ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಗೆ ಬಾಜನರಾದ, ರಂಗಕರ್ಮಿ ಪುರುಷೋತ್ತಮ ತಲವಾಟ ಅವರ ಕಲಾಸೇವೆ ಯಶಸ್ಸಿನ ಶಿಖರವೇರಲಿ ಎಂದು ಶಾಸಕ ಎಚ್. ಹಾಲಪ್ಪ ಹಾರೈಸಿದ್ದಾರೆ.
ಪ್ರಶಸ್ತಿಗೆ ಬಾಜನರಾದ ಪುರುಷೋತ್ತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಪುರುಷೋತ್ತಮ ಅವರು ಥಿಯೇಟರ್ ಆರ್ಟ್ಸ್ ಹಾಗೂ ರಂಗ ಸಜ್ಜಿಕೆಯಲ್ಲಿ ಸಲ್ಲಿಸಿದ ವಿಶೇಷ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಸಾಧನೆಗಳು ನಮ್ಮೂರಿನ ಹೆಮ್ಮೆ ಎಂದು ಪ್ರಶಂಸಿಸಿದರು.

Also read: ಪೊಲೀಸ್ ವಾಹನ ಡಿಕ್ಕಿಯಾಗಿ 6 ವರ್ಷದ ಬಾಲಕಿ ದುರ್ಮರಣ: ಐಪಿಸಿ ಅಡಿ ಬಿತ್ತು ಕೇಸ್
ಮಧುರಾ ಶಿವಾನಂದ್, ವಿ. ಮಹೇಶ್, ಗಣೇಶ್ ಪ್ರಸಾದ್, ವಿಜಯ ವಾಮನ, ಸಂತೋಷ್ ಶೇಟ್, ಸತೀಶ್ ಮೊಗವೀರ, ರಾಘವೇಂದ್ರ, ಜಿ.ಆರ್. ಪಂಡಿತ್ ಉಪಸ್ಥಿತರಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಭಿನಂದನಾ ಕಾರ್ಯಕ್ರಮ ಶಿರಸಿಯಲ್ಲಿ ನಡೆದಿದ್ದು, ಶಾಸಕ ಹಾಲಪ್ಪನವರು ಪಾಲ್ಗೊಂಡು, ಕಾಗೇರಿ ಅವರನ್ನು ಅಭಿನಂದಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾಗೇರಿಯವರ ತಾಯಿ ಸರ್ವೇಶ್ವರಿ ಅನಂತ ಶಿವರಾಮ ಹೆಗ್ಡೆ ಯವರು, ಪತ್ನಿ ಭಾರತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸಚಿವರಾದ ಸುನೀಲ್ ಕುಮಾರ್, ಶಾಸಕರಾದ ರೂಪಾಲಿ ನಾಯ್ಕ್, ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.











Discussion about this post