ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ನೂತನ ಆರ್‌ಟಿಪಿಸಿಆರ್ ಲ್ಯಾಬ್ ಹಾಗೂ ಐಸಿಯು ಘಟಕವನ್ನು ಶಾಸಕ ಹೆಚ್. ಹಾಲಪ್ಪ MLA Halappa ಉದ್ಘಾಟಿಸಿದರು.
ಮಂಗನ ಕಾಯಿಲೆ, ಕೋವಿಡ್ ಪರೀಕ್ಷೆ ಸೇರಿದಂತೆ ವಿವಿಧ ರೀತಿ ರಕ್ತ ಮಾದರಿ ಸಂಗ್ರಹಿಸಲು ಆರ್‌ಟಿಪಿಸಿಆರ್ ಲ್ಯಾಬ್ ಉಪಯುಕ್ತವಾಗಿದೆ. ಈ ಹಿಂದೆ ಅರಳಗೋಡು ಮಂಗನ ಖಾಯಿಲೆಯಿಂದ ಅನೇಕ ಜನ ಮೃತಪಟ್ಟು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು, ಮಂಗನ ಖಾಯಿಲೆ ಪತ್ತೆ ಹಚ್ಚಲು ರಕ್ತ ಮಾದರಿಯನ್ನು ಮಹಾರಾಷ್ಟ್ರದ ಪೂನಾಕ್ಕೆ ಕಳುಹಿಸಿ, ವರದಿ ಬರಲು ವಾರಗಟ್ಟಲೆ ಕಾಯುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು, ಅಧಿವೇಶನದಲ್ಲಿ ಹಾಗೂ ಸರ್ಕಾರದ ಹಂತದಲ್ಲಿ ಸತತ ಪ್ರಯತ್ನ ನೆಡೆಸಿ, ಆರ್‌ಟಿಪಿಸಿಆರ್ ಲ್ಯಾಬ್ ಮಂಜೂರಾತಿ ಮಾಡಿಸಿದ್ದರು.
ಈ ಸಂದರ್ಭದಲ್ಲಿ ಎಸಿ, ಟಿಹೆಚ್‌ಒ, ವೈದ್ಯಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.












Discussion about this post