ಕಲ್ಪ ಮೀಡಿಯಾ ಹೌಸ್ | ಸಾಗರ |
ಮಲೆನಾಡಿನ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು, ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ನ ಸಹಭಾಗಿತ್ವದೊಂದಿಗೆ ಹಳ್ಳಿಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ವಿಸ್ತರಿಸಲು, ಸಾಗರ ತಾಲ್ಲೂಕಿನಲ್ಲಿ, Fiber saturation ಯೋಜನೆ ಆರಂಭವಾಗಿದ್ದು 46 ಟವರ್ ಅಳವಡಿಸಲು ಕಾರ್ಯಾರಂಭ ಮಾಡಲಾಗಿದೆ ಎಂದು ಶಾಸಕ ಹೆಚ್. ಹಾಲಪ್ಪ MLA Halappa ಹೇಳಿದರು.
ಸಾಗರ ತಾಪಂ ಸಭಾಂಗಣದಲ್ಲಿ ಅವರು ಇಂದು ಅಂತರ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ, ಕರೂರು, ಬಾರಂಗಿ ಹೋಬಳಿ ವ್ಯಾಪ್ತಿಯ ಸೂಕ್ತ ಸ್ಥಳಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ಅಳವಡಿಸಲು ಅರಣ್ಯ ಇಲಾಖೆಯವರು ಅನುಮತಿ ನೀಡುವಂತೆ ಸೂಚಿಸಿದರು,

Also read: ಜಂಕ್ಫುಡ್ ಗುಲಾಮಗಿರಿಯಿಂದ ಹೊರಬಂದು ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಿ
ತಹಶೀಲ್ದಾರರು, ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಜಿಲ್ಲಾಧ್ಯಕ್ಷರು, EO, ಅರಣ್ಯ ಇಲಾಖೆ ಅಧಿಕಾರಿಗಳು, ಬಿಎಸ್‌ಎನ್‌ಎಲ್ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.












Discussion about this post