ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಯಾವುದೇ ರೀತಿಯಲ್ಲಿಯೂ ಸಹ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಮರ ಕಡಿಯಿರಿ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ಸೂಚನೆ ನೀಡಿದರು.
ಮುತ್ತೂರು-ಬ್ರಹ್ಮೇಶ್ವರ ಸಂಪರ್ಕಿಸುವ ರಸ್ತೆಗೆ 485.47 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಿಎಂಜಿಎಸ್’ವೈ ರಸ್ತೆ(5.76 ಕಿಮೀ) ಕಾಮಗಾರಿಗೆ ಮರಗಳನ್ನು ತೆರವು ಮಾಡಲು ಅರಣ್ಯಾಧಿಕಾರಿಗಳು ಸಮಸ್ಯೆ ಮಾಡುತ್ತಿದ್ದು ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕೋಟ್ಯಂತರ ರೂ. ವೆಚ್ಚದಲ್ಲಿ ಶಾಶ್ವತ ರಸ್ತೆ ನಿರ್ಮಾಣವಾಗುತ್ತಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ರಸ್ತೆಯ ಮಧ್ಯಭಾಗದಲ್ಲಿ ಬರುವ ಮರಗಳನ್ನು ಅಗತ್ಯತೆಗೆ ತಕ್ಕಂತೆ ತೆರವು ಮಾಡಿ, ಅನಗತ್ಯವಾಗಿ ಮರಗಳನ್ನು ಕಡಿಯಬೇಡಿ, ಅರಣ್ಯ ಇಲಾಖೆಯವರು ಹಾಗೂ ಪಿಎಂಜಿಎಸ್’ವೈಅಧಿಕಾರಿಗಳು ಸಹಮತದೊಂದಿಗೆ ಕಾಮಗಾರಿ ನೆಡಸಿ ಎಂದು ಸೂಚಿಸಿದರು.
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪಿಎಂಜಿಎಸ್’ವೈ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.
ಇನ್ನು, ಹೊಸನಗರ ತಾಲೂಕು ಜಯನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಹೊಸನಗರ ಮಂಡಲದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ, ಸಮಾರಂಭ ಉದ್ದೇಶಿಸಿ ಶಾಸಕರು ಮಾತನಾಡಿದರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆ ನೆಡೆದ ಸಭೆ ಬಗ್ಗೆ, ಚರ್ಚಿಸಿದ ವಿಷಯಗಳು ಹಾಗೂ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳ ನೇಮಕವಾಗಿರುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು, ತಾ.ಮಂಡಲ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ವಿವಿಧ ಮೋರ್ಚಾ, ಪ್ರಕೋಷ್ಠಗಳ ಪ್ರಮುಖರು, ಪದಾಧಿಕಾರಿಗಳು, ಅಪೇಕ್ಷಿತ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post