ಕಲ್ಪ ಮೀಡಿಯಾ ಹೌಸ್ | ಸಾಗರ |
ವಿಭಾಗ ಉಪ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆ ಬೇಟೆಗಾರನೊಬ್ಬನನ್ನು ಮಾಲು ಸಹಿತ ಬಂಧಿಸಲಾಗಿದೆ.
ಆನವಟ್ಟಿ ವಲಯದ ತವನಂದಿ ಶಾಖೆಯ ಕೆರೆಕೊಪ್ಪ ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಕೆರೆಕೊಪ್ಪ ಗ್ರಾಮದ ನಾರಾಯಣಪ್ಪೆ ಎಂಬ ವ್ಯಕ್ತಿಯನ್ನು ಮಾಲು ಸಹಿತ ಬಂಧಿಸಲಾಗಿದೆ. ಕೆರೆಕೊಪ್ಪ ವಾಸಿಗಳಾದ ಬೂದ್ಯಪ್ಪ, ನಾಗಪ್ಪ, ಆಸೀಫ್, ಫೈಜಾನ್ ಸಾಬ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.
ಬಂಧಿತನಿಂದ ಜಿಂಕೆ ತಲೆ ಸೇರಿ 10 ಕೆಜಿ ಜಿಂಕೆ ಮಾಂಸ, ಎರಡು ಕತ್ತಿ, ಎರಡು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್, ಸೊರಬ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಬಸ್ರೂರ್ ಅವರುಗಳ ಮಾರ್ಗದರ್ಶನದಲ್ಲಿ ಆನವಟ್ಟಿ ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅಂಗಡಿ, ಡಿವೈಆರ್’ಎಫ್’ಓ ವೀರಭದ್ರಯ್ಯ, ಅರಣ್ಯ ರಕ್ಷಕ ಟಿ. ಮುರಳಿ, ಬೇವಿನ ಗಿಡದ, ದೊಡ್ಡಬಸಯ್ಯ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post