ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗವನ್ನು ತೋಟಗಳನ್ನು ದತ್ತು ತೆಗೆದುಕೊಂಡು ಇಲಾಖೆಯಿಂದಲೇ ರೋಗನಿಯಂತ್ರಣ ಮಾಡಿಕೊಡಬೇಕೆಂದು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ತೋಟಗಾರಿಕೆ ಉಪನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಲಾಯಿತು.
ಈ ಹಿನ್ನೆಲೆಯಲ್ಲಿ ಕಳೆದ ವರ್ಷ ತೋಟಗಾರಿಕೆ ಇಲಾಖೆ ಔಷಧಿಗಳನ್ನ ಸಿಂಪಡಣೆಗೆ ಉಚಿತವಾಗಿ ನೀಡಿದ್ದು ಇದಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಅನೇಕ ತೋಟಗಳು ನಾಶಗೊಂಡಿವೆ. ಅಡಿಕೆ ಬೆಳೆಗಾರರ ಕುಟುಂಬ ಜೀವನ ಮಾಡುವುದು ಕಷ್ಟವಾಗಿದೆ ಈ ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ನೆರವಾಗಬೇಕು ಜೊತೆಗೆ ಇನ್ನೂ ಹೆಚ್ಚಿನ ಔಷಧಿಯನ್ನು ಸಿಂಪಡಣೆಗೆ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Also read: ಕಚೇರಿಯಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಲೋಕಾಯುಕ್ತ ಪೊಲೀಸ್ ಬಲೆಗೆ
ಈ ಸಂದರ್ಭದಲ್ಲಿ ಸಾಗರ ಪ್ರಾಂತೀಯ ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಕ, ಬಸವರಾಜ್ ದೊಂಬೆಕೊಪ್ಪ, ಮಾಮ್ ಕೋಸ್ ಉಪಾಧ್ಯಕ್ಷ ಯು.ಹೆಚ್. ರಾಮಪ್ಪ, ಮಹೇಶ್ ಹುಲ್ಕುಳಿ, ದಿನೇಶ್ ಬರದಳ್ಳಿ, ನಾಗರಾಜ್ ಬೇಲೂರು, ಲಕ್ಷ್ಮೀನಾರಾಯಣ್, ಮತ್ತು ಹೆಚ್. ಆರ್. ತೀರ್ಥೇಶ್, ಮಂಜುನಾಥ್ ದೊಂಬೆಕೊಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.











Discussion about this post