ಕಲ್ಪ ಮೀಡಿಯಾ ಹೌಸ್ | ಸಾಗರ |
ಪಂಚಾಯ್ತಿ ಮಟ್ಟದಲ್ಲಿ ಜೀವವೈವಿದ್ಯ ಕಾಯ್ದೆ ಅನುಷ್ಠಾನ ಮಾಡಲು ಇಲ್ಲಿ ನಡೆದ ಜಾಗೃತಿ ಕಾರ್ಯಕ್ರಮಗಳು ರಾಜ್ಯದ 31 ಜಿಲ್ಲೆಗಳಲ್ಲಿ ವಿಸ್ತಾರವಾಗಬೇಕು ಎಂದು
ಇದರಿಂದ ಪಂಚಾಯ್ತಿಯಲ್ಲಿರುವ ಜೀವವೈವಿದ್ಯ ಸಮಿತಿಗಳು ಗ್ರಾಮದ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು. ತಮ್ಮ ಗ್ರಾಮದ ಜೀವವೈವದ್ಯವನ್ನು ಗ್ರಾಮದ ಜನರೇ ನಿರ್ವಹಿಸಬೇಕು ಎಂದು ಜೀವ ವೈವಿದ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶೀಸರ ಕರೆ ನೀಡಿದರು.

ಸಾಗರ ತಾಲ್ಲೂಕು ಜೀವವೈವಿಧ್ಯ ಸಮಿತಿ ದೇಶದಲ್ಲೇ ಮಾದರಿ ಕೆಲಸ ಮಾಡಿದ ಹೆಗ್ಗಳಿಕೆ ಪಡೆದಿದ್ದು, ಪಂಚಾಯತ ಜೀವವೈವಿಧ್ಯ ಸಮಿತಿಯ ವಿಶೇಷ ಸಭೆಯಲ್ಲಿ ಅವರು ಅಭಿನಂದನೆ ಸಲ್ಲಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಜೀವವೈವಿದ್ಯದ ಚಟುವಟಿಕೆಗಳ ಸಚಿತ್ರ ವರದಿಯನ್ನು ಬಿಡುಗಡೆಗೊಳಿಸಿದರು.
ಬರೂರು ಗ್ರಾಮದ ಸೀತಾ ಅಶೋಕ ವನ ಹಾಗೂ ಬೆಳ್ಳಣ್ಣೆ ಊರಿನ ರಾಮಪತ್ರೆ ಜಡ್ಡಿಗಳಿಗೆ ತಾಲ್ಲೂಕು ಸಮಿತಿ ಮಾನ್ಯತೆ ನೀಡಿದೆ. ರಾಜ್ಯ ಮಟ್ಟದಲ್ಲಿ ಜೀವವೈವಿದ್ಯ ತಾಣ ಎಂದು ಈ ಸ್ಥಳವನ್ನು ಘೋಷಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ. ಎಂದು ಜೀವವೈವಿದ್ಯ ಮಂಡಳಿಯ ಸದಸ್ಯ ಕೆ. ವೆಂಕಟೇಶ ಕವಲಕೋಡು ಮಾಹಿತಿ ನೀಡಿದರು.

ಇತಿಹಾಸ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಅಂಬಾರಗುಡ್ಡ ಪಾರಂಪರಿ ತಾಣವಾದ್ದರಿಂದ ಗಣಿಗಾರಿಕೆ ತಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಳಸವಳ್ಳಿ ಜೀವವೈವಿದ್ಯ ವನ, ನೀಚಡಿಯ ಔಷಧಿ ಮೂಲಿಕಾ ವನ, ವರದಾಮೂಲ, ವರದಹಳ್ಳಿ, ಜೀವವೈವಿದ್ಯ ಸನ್ಮಾನ, ಗ್ರಾಮ ನೈಸರ್ಗಿಕ ಭೂಮಿ ರಕ್ಷಣೆ, ದೇವರ ಕಾಡು ಅಭಿವೃದ್ಧಿಗೆ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಎಂ, ಕಮ್ಮಾರ್ ತಿಳಿಸಿದರು.

ಆನೆಗುಳಿ ಸುಬ್ಬರಾವ್ ಸಂಪಾದಕತ್ವದಲ್ಲಿ ಹೊರತಂದ ಬಾಳೆಗೆರೆ ನಂದನವನದ ಜೀವವೈವಿದ್ಯ ವರದಿಯನ್ನು ಬಿಡುಗಡೆ ಮಾಡಲಾಯಿತು. ನಿವೃತ್ತಿ ಹೊಂದುತ್ತಿರುವ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು. ವೃಕ್ಷಲಕ್ಷ ಆಂದೋಲನದ ಬಿ.ಹೆಚ್. ರಾಘವೇಂದ್ರ ಬಾಳೆಗೆರೆ ನಂದನವನದ ಕೆಸವಿನಮನೆ ಮಂಜುನಾಥ, ವಿವಿಧ ಅಧಿಕಾರಿಗಳು, ಪರಿಸರ ಕಾರ್ಯಕರ್ತರು ಹಾಜರಿದ್ದರು.