ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ನಗರೇಶ್ವರ ದೇವಾಲಯದ ದೇವಿ ಕೊರಳಲ್ಲಿದ್ದ ಮಾಂಗ್ಯಲ ಸರವನ್ನು ಅಪಹರಿಸಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಬಂಗಾರದ ಸರವನ್ನು ವಶಕ್ಕೆ ಪಡೆದಿದ್ದಾರೆ.
ನಗರೇಶ್ವರ ದೇವಾಲಯದ ದೇವಿಯ ಕೊರಳಲ್ಲಿದ್ದ ಅಂದಾಜು 30 ಗ್ರಾಂ 570 ಮಿಲಿ ತೂಕದ ಮಾಂಗಲ್ಯ ಸರವನ್ನು ಕಳ್ಳತನವಾಗಿತ್ತು. ಈ ಕುರಿತಂತೆ ದಾಖಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿ, ಆರೋಪಿ ಪತ್ತೆಗೆ ಬಲೆ ಬೀಸಲಾಗಿತ್ತು.
Also read: ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು, ಪೊಲೀಸರಿಗೆ ರಕ್ಷಣೆ ಇಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ
ಪ್ರಕರಣವನ್ನು ಬೇಧಿಸಿದ ಸಾಗರ ಟೌನ್ ಠಾಣೆ ಪೊಲೀಸರು ಸಿರಿವಂತೆಯ ಶಿವಕುಮಾರ(39) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಅಂದಾಜು ಮೌಲ್ಯ 2,00,000 ರೂ.ಗಳ 30 ಗ್ರಾಂ 570 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಆರೋಪಿ ಶಿವಕುಮಾರ್ ವಿರುದ್ಧ ಕಲಂ 454, 457, 380 ಐಪಿಸಿ ಕಾಯ್ದೆ ರೀತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಪ್ರಶಂಸಿಸಿ, ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post