ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ಆನಂದಪುರಂನ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ವಿನಯ್(27) ಎಂದು ಗುರುತಿಸಲಾಗಿದೆ.
ಆನಂದಪುರಂನ ಅಶೋಕ ರಸ್ತೆಯ ನಿವಾಸಿ ನಾಗರಾಜ್ ಎನ್ನುವವರ ಪುತ್ರನಾದ ವಿನಯ್, ಅಡಿಕೆ ವ್ಯಾಪಾರ ಮಾಡುತ್ತಿದ್ದನು ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಅವನು ಒಬ್ಬಂಟಿಯಾಗಿ ಇರುತ್ತಿದ್ದ ಯಾರಿಗೂ ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಳ್ಳುತ್ತಿರಲಿಲ್ಲ. ಯಾರೇ ಎಷ್ಟೇ ಕೇಳಿ ಏನೇ ಮಾತಾಡಿಸಿದೆನೋರು, ಯಾರ ಹತ್ರನು ಮಾತನಾಡುತ್ತಿರಲಿಲ್ಲ ಮೌನಿಯಾಗಿ ಇರುತ್ತಿದ್ದ ಎಂದು ಹೇಳಲಾಗಿದೆ.
ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿ ಇದ್ದಿದ್ದನ್ನು ಕಂಡ ತಂದೆ ತಾಯಿಗೆ ಅನುಮಾನ ಸೃಷ್ಟಿಯಾಯಿತು. ಮಗ ಕೋಣೆಯಲ್ಲಿಯೇ ಇರುವುದನ್ನು ಗಮನಿಸಿದ ಪೋಷಕರು ಕೋಣೆಯೊಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















