ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿ ಮಾಧ್ಯಮವಾಗಿ ಬೆಳೆಯುತ್ತಿರುವುದು ಸಾಮಾಜಿಕ ಜಾಲತಾಣಗಳು. ಯಾವುದೇ ಸಮಸ್ಯೆ ಎದುರಾದರೂ ಜನ ಥಟ್ಟನೆ ನೆನಪಿಸಿಕೊಳ್ಳುವುದು ಇದನ್ನೇ. ಇವುಗಳ ಮೂಲಕ ತಮ್ಮ ಸಮಸ್ಯೆಯನ್ನಾಗಲಿ ತಮ್ಮ ಪ್ರತಿಭೆಯನ್ನು ಜನರ ಮುಂದಿಡಲು ಪ್ರಯತ್ನ ಮಾಡುತ್ತಾರೆ.
ಹಾಗೆಯೇ ನಟನೆಯ ಮೇಲೆ ಅತೀವ ಪ್ರೀತಿ ಹೊಂದಿರುವ ನಟನಾ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಬಳಸುವ ವೇದಿಕೆಯಂತೆ ಡಬ್ ಸ್ಮ್ಯಾಷ್ ಸಹಕಾರಿಯಾಗಿದೆ. ಇದರ ಮೂಲಕ ತಮ್ಮ ನಟನಾ ಸಾಮರ್ಥ್ಯ ಏನು ಎಂದು ಜನರಿಗೆ ತಿಳಿಸಲು ಇದನ್ನು ಒಂದು ಅಸ್ತ್ರದಂತೆ ಉತ್ತಮ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ. ಅದೆಷ್ಟೋ ಪ್ರತಿಭೆಗಳು ಡಬ್ ಸ್ಮ್ಯಾಷ್ ನ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ.
ಅಂತಹವರ ಸಾಲಿಗೆ ಸೇರುವ ಪ್ರತಿಭೆಯೇ ಕೆ. ಸಾಗರಿಕ.
14 ವರ್ಷ ವಯಸ್ಸಿನ ಈ ಪುಟಾಣಿ ಕಲಿಯುತ್ತಿರುವುದು 9ನೆಯ ತರಗತಿಯಲ್ಲಿ. ಆದರೂ ಡಬ್ ಸ್ಮ್ಯಾಶ್ ಮಾಡಲು ಆರಂಭಿಸಿದ ಕೇವಲ 2 ವರ್ಷಗಳಲ್ಲಿ ಡಬ್ ಸ್ಮ್ಯಾಶ್ ರಾಣಿ ಎಂಬ ಖ್ಯಾತಿ ಗೆದ್ದುಕೊಂಡಿದ್ದಾಳೆ.
ದಿಗ್ವಿಜಯ ಚಾನೆಲ್ ನ ಡಬ್ ಸ್ಮ್ಯಾಷ್ ಚಾಲೆಂಜ್ ರಿಯಾಲಿಟಿ ಶೋನಲ್ಲಿ ಈಕೆ ರನ್ನರ್ ಅಪ್ ಆಗಿದ್ದಾಳೆ.
ಈಕೆಯ ನಟನಾ ಸಾಮರ್ಥ್ಯ ಗಮನಿಸಿ ಈಕೆಗೆ ಮರಾಠಿ ಚಿತ್ರದಲ್ಲಿ ಪಾತ್ರ ನೀಡಿದ್ದು ಈಕೆ ಸಮರ್ಥ ರೀತಿಯಲ್ಲಿ ನಟಿಸಿದ್ದಳು. ಜೊತೆಗೆ ಇನ್ನೂ ಶೂಟಿಂಗ್ ಆರಂಭ ಆಗದ ನಾಲ್ಕು ಚಲನಚಿತ್ರಕ್ಕೆ ಈಕೆಯನ್ನ ಆಯ್ಕೆ ಮಾಡಿರುವುದು ಈಕೆಯ ನಟನಾ ಸಾಮರ್ಥ್ಯ ಎತ್ತಿ ತೋರಿಸುತ್ತದೆ.
ಜೊತೆಗೆ ನೃತ್ಯದಲ್ಲಿಯೂ ಒಲವು ಹೊಂದಿರುವ ಈಕೆ ಜಿಲ್ಲಾ ಮಟ್ಟದ ನೃತ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. ಮಂಗಾರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾಳೆ. ಅದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಇಷ್ಟೊಂದು ಪ್ರತಿಭಾಶಾಲಿಯಾಗಿರುವ ಈಕೆಯ ಭವಿಷ್ಯ ಉಜ್ವಲವಾಗಿರಲಿ ಈಕೆ ಇನ್ನಷ್ಟು ಚಿತ್ರದಲ್ಲಿ ನಟನೆ ಮಾಡುವಂತಾಗಲಿ ಉತ್ತಮ ಚಿತ್ರನಟಿಯಾಗಿ ರೂಪುಗೊಳ್ಳಲಿ ಎಂಬುದು ನಮ್ಮಯ ಆಶಯ.
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
ಚಿತ್ರಕೃಪೆ-ಮಾಹಿತಿ-ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post