ಕಲ್ಪ ಮೀಡಿಯಾ ಹೌಸ್ | ಸಕ್ರೆಬೈಲ್(ಶಿವಮೊಗ್ಗ) |
ಇಲ್ಲಿನ ಸಕ್ರೆಬೈಲ್ ಆನೆ ಬಿಡಾರದ #Sakrebail Elephant Camp ಬಳಿಯಲ್ಲಿ ಖಾಸಗಿ ಬಸ್ ಟೈರ್ ಬ್ಲಾಸ್ಟ್ #Bus Wheel Blast ಆಗಿ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಖಾಸಗಿ ಬಸ್ ಇಂದು ಬೆಳಗಿನ ಜಾವ ಸಕ್ರೆಬೈಲ್ ಬಳಿ ಬರುವ ವೇಳೆ ಟೈರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು ಇಡೀ ಬಸ್’ಗೆ ಆವರಿಸಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ #Fire Engine ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲ ಪ್ರಯಾಣಿಕರನ್ನು ಬದಲಿ ಬಸ್’ನಲ್ಲಿ ತಮ್ಮ ಊರುಗಳಿಗೆ ಕಳುಹಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post