ಕಲ್ಪ ಮೀಡಿಯಾ ಹೌಸ್ | ಲಖ್ನೋ |
ಅಯೋಧ್ಯೆಯ #Ayodhya ಹನುಮಾನ್ ಗಢಿ ದೇವಾಲಯದ ಮಹಂತರ/ಅರ್ಚಕರ ಭೇಟಿಯಾಗಿ ಆರ್ಶೀವಾದ ಪಡೆದ ಕಾರಣಕ್ಕಾಗಿ ಸಮಾಜವಾದಿ ಪಕ್ಷದ ಯುವ ನಾಯಕಿ ಮುಸ್ಕಾನ್ ಮಿಶ್ರಾ #MuskanMishra ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ.
ಏನಿದು ಹಿನ್ನೆಲೆ?
ಇದೇ ಅಕ್ಟೋಬರ್ 13ರಂದು ಮುಸ್ಕಾನ್ ಮಿಶ್ರಾ ಅಯೋಧ್ಯೆಯ ಹನುಮಾನ್ ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಹಾಂತ್ ರಾಜು ದಾಸ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.
ಈ ವೀಡಿಯೊ ವೈರಲ್ ಆದ ತಕ್ಷಣ, ಎಸ್ಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಎಸ್ಪಿ ಸಂಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ #AkhileshYadav ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಮಹಂತ್ ಅವರನ್ನು ಅವರು ಹೇಗೆ ಭೇಟಿಯಾಗಬಹುದು ಎಂದು ಅನೇಕ ನಾಯಕರು ಪ್ರಶ್ನಿಸಿದ್ದಾರೆ.
ಅಯೋಧ್ಯೆಯ ಹನುಮಾನ್ ಗಢಿ ದೇವಾಲಯದ ಮಹಾಂತ್ ರಾಜು ದಾಸ್ ಅವರೊಂದಿಗಿನ ಭೇಟಿಯ ವೈರಲ್ ವೀಡಿಯೊ ಇದಕ್ಕೆ ಕಾರಣವಾಗಿತ್ತು. ಈ ಭೇಟಿ ಮುಸ್ಕಾನ್ ಗೆ ದುಬಾರಿಯಾಗಿ ಪರಿಣಮಿಸಿದೆ. ಇದು ತಮ್ಮ ಸಿದ್ದಾಂತಗಳಿಗೆ ವಿರುದ್ಧವಾಗಿದ್ದು ಪಕ್ಷವು ಕಠಿಣ ಕ್ರಮ ಕೈಗೊಂಡಿದೆ ಪಕ್ಷ ಹೇಳಿದೆ.
25 ವರ್ಷದ ಮುಸ್ಕಾನ್ ಮಿಶ್ರಾ ಲಖ್ನೋದ ಯುವ ನಾಯಕಿ ಸಮಾಜವಾದಿ ಪಕ್ಷದ ಡಿಜಿಟಲ್ ಪ್ರಚಾರದ ಮುಖ್ಯವಾದ ಸ್ಥಾನದಲ್ಲಿದ್ದರು. ಇವರು, ಇನ್ಸ್ಟಾಗ್ರಾಮ್’ನಲ್ಲಿ 6.68 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಪಕ್ಷದ ಪ್ರಚಾರಕ್ಕೆ ಸಂಬಂಧಿಸಿದ ವೀಡಿಯೊಗಳು ಮತ್ತು ಪೋಸ್ಟ್’ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಅವರು 2024ರ ಸೆಪ್ಟೆಂಬರ್ 21ರಂದು ಸಮಾಜವಾದಿ ಪಕ್ಷವನ್ನು ಸೇರಿದ್ದು ನಂತರ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post