ಕಲ್ಪ ಮೀಡಿಯಾ ಹೌಸ್ | ಸ್ಯಾನ್ ಫ್ರಾನಿಸ್ಕೋ |
ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ಶೀಘ್ರದಲ್ಲೇ ರಾಜೀನಾಮೆ ನೀಡುವುದಾಗಿ ಎಲೆನ್ ಮಸ್ಕ್ Elon Musk ಘೋಷಿಸಿದ್ದಾರೆ.
I will resign as CEO as soon as I find someone foolish enough to take the job! After that, I will just run the software & servers teams.
— Elon Musk (@elonmusk) December 21, 2022
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಟ್ವಿಟರ್ ನ ಕೆಲಸವನ್ನು ಮಾಡಬಲ್ಲ ಯಾರಾದರೂ ಮೂರ್ಖ ಸಿಕ್ಕಿದ ಕೂಡಲೇ ರಾಜೀನಾಮೆ ನೀಡುತ್ತೇನೆ. ನಂತರ, ನಾನು ಸಾಫ್ಟ್‌ವೇರ್ ಮತ್ತು ಸರ್ವರ್‌ಗಳ ತಂಡಗಳನ್ನು ಮುನ್ನಡೆಸುತ್ತೇನೆ” ಎಂದು ಹೇಳಿದ್ದಾರೆ.
ತಾವು ಸಿಇಓ ಹುದ್ದೆಯಿಂದ ಕೆಳಗೆ ಇಳಿಯಬೇಕೆ ಬೇಡವೇ ಎಂಬ ಬಗ್ಗೆ ಎಲಾನ್ ಮಸ್ಕ್ ಭಾನುವಾರ ಸಂಜೆ ಟ್ವಿಟರ್ ನಲ್ಲಿ ಸಮೀಕ್ಷೆ ಮಾಡಿದ್ದರು. ಅದರಲ್ಲಿ 57.5 ಶೇಕಡ ಮಂದಿ ರಾಜೀನಾಮೆ ಕೊಡಬೇಕು ಎನ್ನುವುದಕ್ಕೆ ಮತ ಹಾಕಿದ್ದರು. ಟ್ವಿಟರ್ ಸಿಇಓ ಹುದ್ದೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಸ್ಕ್ ಅವರು ಪದತ್ಯಾಗದ ಸುಳಿವು ನೀಡಿದ್ದಾರೆ.
Also read: ಚತುಷ್ಪಥ ರಸ್ತೆಯಾಗಲಿವೆ ಶಿವಮೊಗ್ಗ ಜಿಲ್ಲೆಯ ಈ ನಾಲ್ಕು ಮಾರ್ಗಗಳು! ಯಾವೆಲ್ಲಾ ನಗರ ಸಂಪರ್ಕಿಸಲಿದೆ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post