ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್‌ವುಡ್ |
ರಿಷಬ್ ಶೆಟ್ಟಿ Rishab Shetty ನಿರ್ದೇಶನದ ಕಾಂತಾರ Kanthara ಚಿತ್ರ ದೇಶದಾದ್ಯಂತ ಪ್ರದರ್ಶನ ಕಾಣುತ್ತಿದ್ದು, ಇದರ ಅಬ್ಬರಕ್ಕೆ ಇತರೆ ಚಿತ್ರಗಳು ತತ್ತರಿಸಿ ಹೋಗಿವೆ. ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಈಗಾಗಲೇ 119ಕೋಟಿ ಗಳಿಸಿದ್ದು, 100 ಕೋಟಿ ಕ್ಲಬ್ ಸೇರಿದ ೬ನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡದಲ್ಲಿ ಮೊದಲಿಗೆ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದ ನಂತರ ಪ್ಯಾನ್ ಇಂಡಿಯಾ ಪರವಾಗಿ ತೆರೆ ಕಂಡಿತು. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಬಿಡುಗಡೆಗೊಂಡು ಬೇರೆಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಅಬ್ಬರಿಸುತ್ತಿದೆ.
ಪ್ರಮುಖವಾಗಿ ಬಾಲಿವುಡ್‌ನಲ್ಲಿ 2100 ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಅಲ್ಲಿನ ಘಟಾನುಘಟಿ ಚಿತ್ರಗಳೇ ತತ್ತರಿಸಿ ಹೋಗಿವೆ. ಕಳೆದ ಶನಿವಾರ ಒಂದೇ ದಿನ 14 ಕೋಟಿ, ಭಾನುವಾರ 18 ಕೋಟಿಯನ್ನು ಚಿತ್ರ ಬಾಚಿಕೊಂಡಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















