ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಬದುಕಿದ್ದಾಗ ಸುಮ್ಮನಿದ್ದು, ಈಗ ಆತ ಇಹಲೋಕ ತ್ಯಜಿಸಿದ ನಂತರ ಅವರ ತೇಜೋವಧೆ ಮಾಡುವುದು ಅಕ್ಷಮ್ಯ ಅಪರಾಧ ಹಾಗೂ ಅಮಾನವೀಯತೆ ಎಂದು ಚಿರು ಸರ್ಜಾ ಆಪ್ತ ಸ್ನೇಹಿತ ಪ್ರಶಾಂತ್ ಸಂಬರಗಿ ಕಿಡಿ ಕಾರಿದ್ದಾರೆ.
ಡ್ರಗ್ಸ್ ಸೇವನೆ ವಿಚಾರದಲ್ಲಿ ಚಿರು ಸರ್ಜಾ ಹೆಸರನ್ನು ಪ್ರಸ್ತಾಪಿಸಿರುವ ಇಂಧ್ರಜಿತ್ ಲಂಕೇಶ್ ಹೇಳಿಕೆ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ ಸರಿಯಾಗಿಯೇ ಕೌಂಟರ್ ನೀಡಿದ್ದಾರೆ.
ಸತ್ತ ವ್ಯಕ್ತಿಗೆ ಗೌರವ ನೀಡುವುದು ಹಿಂದೂ ಧರ್ಮ. ಸತ್ಯ ವ್ಯಕ್ತಿಯ ತೇಜೋವಧೆ ಮಾಡುವುದು ಒಂದು ಕರ್ಮ. ಚಿರಂಜೀವಿ ಸರ್ಜಾ ಬದುಕಿದ್ದಾಗಲೇ ಆತ ಡ್ರಗ್ ಅಡಿಕ್ಟ್ ಎಂದು ಹೇಳಿದ್ದರೆ ವಿಚಾರಿಸಬಹುದಿತ್ತು. ಆದರೆ, ಅವರು ಇಹಲೋಕ ತ್ಯಜಿಸಿ ಇಷ್ಟು ತಿಂಗಳಾದ ನಂತರ ಆರೋಪ ಮಾಡುವುದು ಅಕ್ಷಮ್ಯ ಎಂದರು.
ಹೆಚ್ಚು ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ | ಜೀವನಶೈಲಿ ಹೀಗಿರಲಿ | Gastric | Tips For Healthy Life
ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಚಿರಂಜೀವಿ ಸರ್ಜಾ ನನ್ನ ಆತ್ಮೀಯ ಗೆಳೆಯ. ಚಿರು ಸಾವಿನ ದಿನ ಒಂದೊಂದು ಕ್ಷಣವನ್ನೂ ನಾವು ಹೇಗೆ ಕಳೆದಿದ್ದೇವೆ ಎಂದು ನಮಗೆ ಮಾತ್ರ ಗೊತ್ತು. ಅಂದು ಮರಣೋತ್ತರ ಪರೀಕ್ಷೆ ಮಾಡುವಂತೆ ನಾವೇ ವೈದ್ಯರಿಗೆ ಕೇಳಿದ್ದೆವು. ಆದರೆ, ಹೃದಯಾಘಾತವಾಗಿ ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ ಎಂದು ವೈದ್ಯರೇ ಹೇಳಿದ್ದರು ಎಂದರು.
ಯಾವುದೇ ವ್ಯಕ್ತಿ ಸತ್ತ ನಂತರ ಆತನ ಆತ್ಮಕ್ಕೆ ಗೌರವ ನೀಡಬೇಕು. ಆದರೆ, ಚಿರು ಸರ್ಜಾ ಸತ್ತ ನಂತರ ಅವರ ತೇಜೋವಧೆ ಮಾಡುವುದು ಸರಿಯಲ್ಲ. ದಯವಿಟ್ಟು ಯಾರೂ ಈ ವಿಚಾರದಲ್ಲಿ ಮಾತನಾಡುವುದು, ಹೇಳಿಕೆ ನೀಡುವುದು ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿರು ಸರ್ಜಾ ಏನೆಂದು ನಮಗೆ ತಿಳಿದಿದೆ. ನಾವು ಎಂದಿಗೂ ಅವರ ಕುಟುಂಬದೊಂದಿಗೆ ಹಾಗೂ ಚಿರು ಸರ್ಜಾ ಹೆಸರಿನ ಜೊತೆಯಲ್ಲಿ ನಿಂತೇ ನಿಲ್ಲುತ್ತೇವೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post