ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ನವದೆಹಲಿ |
ದಿವಂಗತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಗಂಧದ ಗುಡಿ ಅಧಿಕೃತ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಮನಸೋತಿದ್ದಾರೆ.
ಪಿಆರ್’ಕೆ ಆಡಿಯೋ ಯೂಟ್ಯೂಬ್ ಚಾನಲ್’ನಲ್ಲಿ ಇಂದು ಗಂಧದ ಗುಡಿ ಸಾಕ್ಷ್ಯಚಿತ್ರದ 2 ನಿಮಿಷ 39 ಸೆಕೆಂಡ್’ಗಳ ಟ್ರೇಲರ್ ಬಿಡುಗಡೆಯಾಗಿದೆ.
ಕರುನಾಡಿನ ಅದ್ಬುತ ಪ್ರಾಕೃತಿಕ ಸಂಪತ್ತನ್ನು ಈ ಚಿತ್ರದಲ್ಲಿ ಸ್ವತಃ ಅಪ್ಪು ಸೆರೆ ಹಿಡಿದಿದ್ದು, ಇದು ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು.
ಇನ್ನು, ಗಂಧದ ಗುಡಿ ಟ್ರೇಲರ್’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಫಿದಾ ಆಗಿದ್ದು, ಈ ಕುರಿತು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಪ್ಪು(ಪುನೀತ್ ರಾಜಕುಮಾರ್) ಅವರು ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಹೃದಯದಲ್ಲಿದ್ದಾರೆ. ಅವರೊಬ್ಬ ಪ್ರತಿಭಾವಂತ, ತೇಜಸ್ಸಿನ ವ್ಯಕ್ತಿಯಾಗಿದ್ದರು. ಗಂಧದ ಗುಡಿ ಪ್ರಕೃತಿ ಮಾತೆ, ಕರ್ನಾಟಕ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಅವರ ಪ್ರಯತ್ನಕ್ಕೆ ಶುಭಾಶಯಗಳು ಎಂದಿದ್ದಾರೆ.
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka’s natural beauty and environmental conservation. My best wishes for this endeavour. https://t.co/VTimdGmDAM
— Narendra Modi (@narendramodi) October 9, 2022
ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಈ ಸಾಕ್ಷ್ಯ ಚಿತ್ರವನ್ನು ಅಮೋಘ ವರ್ಷ ನಿರ್ದೇಶಿಸಿದ್ದಾರೆ. ಇದೇ ತಿಂಗಳ 28 ರಂದು ಈ ಸಾಕ್ಷ್ಯ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು, ಗಂಧದ ಗುಡಿ ಅಧಿಕೃತ ಟ್ರೇಲರ್ ಬಿಡುಗಡೆಯಾದ ಕೇವಲ 2 ಗಂಟೆಗಳಲ್ಲಿ 6.2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಟ್ರೇಲರ್’ನಲ್ಲಿ ತಮ್ಮ ನೆಚ್ಚಿನ ನಟನನ್ನು ಅಪ್ಪು ಅಭಿಮಾನಿಗಳು ಕಣ್ತುಂಬಿಕೊಂಡು, ಸಂತೋಷ ಪಡುತ್ತಿದ್ದು, ಬೆಳ್ಳಿತೆರೆಯಲ್ಲಿ ತನ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post