ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನನ್ನ ಆರೋಗ್ಯದ ಕುರಿತಾಗಿನ ಎಲ್ಲ ಪ್ಯಾರಾಮೀಟರ‍್ಸ್ ಉತ್ತಮವಾಗಿದ್ದು, ಎಲ್ಲರ ಹಾರೈಕೆಯಿಂದ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ಪಡೆದು ಮರಳುತ್ತೇನೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ #Shivarajkumar ಭಾವುಕರಾಗಿಯೇ ನುಡಿದರು.
ತಮ್ಮ ಚಿಕಿತ್ಸೆಗಾಗಿ ಅಮೆರಿಕಾಗೆ #America ತೆರಳುವ ಮುನ್ನ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಅವರು, ಭಾವುಕರಾಗಿಯೇ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಮನೆಯಿಂದ ಹೊರಡುತ್ತಿರುವುದರಿಂದ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳ ಭಾವನೆ ಕಂಡು ಸ್ವಲ್ಪ ಎಮೋಷನ್ ಆಗಿದ್ದೇನೆ. ಅದರ ಹೊರತಾಗಿ ನಾನು ಸಕಾರಾತ್ಮಕವಾಗಿಯೇ ಇದ್ದೇನೆ ಎಂದರು.
ಡಿ.24ರಂದು ಸರ್ಜರಿ ನಡೆಯಲಿದ್ದು, ಅದರ ಕುರಿತಾಗಿ ಯಾವುದೇ ಚಿಂತೆಯಿಲ್ಲ. ಎಲ್ಲವೂ ಸಕಾರಾತ್ಮಕವಾಗಿಯೇ ಇದೆ. ಸುಮಾರು ಐದು ವಾರಗಳ ಕಾಲ ಮನೆ, ದೇಶ ಎಲ್ಲವನ್ನೂ ಬಿಟ್ಟು ಇರುವುದರಿಂದ ಕೊಂಚ ಬೇಸರವಾಗುತ್ತಿದೆ. ಆದರೆ, ಎಲ್ಲರ ಹಾರೈಕೆ ನನ್ನೊಂದಿಗೆ ಇದೆ ಎಂದು ಭಾವುಕರಾದರು.
ಎಲ್ಲ ಮಾಧ್ಯಮಗಳಿಗೆ ನನ್ನ ಅರೋಗ್ಯ ಕುರಿತಾಗಿ ವಿಷಯ ತಿಳಿದಿದ್ದರೂ ಅದನ್ನು ವೈಭವೀಕರಣ ಮಾಡದೇ, ಕಾಳಜಿ ವಹಿಸಿದ್ದು ನನಗೆ ಸಂತೋಷವಾಗಿದೆ ಎಂದರು.
Also read: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ
ಜನವರಿ 25ರಂದು ಅಲ್ಲಿಂದ ವಾಪಾಸ್ ಹೊರಡಲಿದ್ದು, ಜ.26ರಂದು ಬೆಂಗಳೂರಿಗೆ ಮರಳಲಿದ್ದೇನೆ ಎಂದರು.
ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ?
ಶಿವಣ್ಣ ಅವರಿಗೆ ಅಮೆರಿಕಾದಲ್ಲಿರುವ ಮಯೋನಿಕ್ ಕ್ಯಾನ್ಸರ್ ಇನ್ಟಿಟ್ಯೂಟ್(ಎಂಸಿಐ) ಎಂಬ ಪ್ರಖ್ಯಾತ ಆಸ್ಪತ್ರೆಯಲ್ಲಿ ಡಿ.24ರಂದು ಶಸ್ತ್ರಚಿಕಿತ್ಸೆ ನಡೆಯಲಿದ್ದು, ಜ.25ರಂದು ವಾಪಾಸ್ ಬೆಂಗಳೂರಿಗೆ ಹೊರಡಲಿದ್ದಾರೆ. ಅಲ್ಲಿಯವರೆಗೂ ಅಲ್ಲಿಯೇ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯಲಿದ್ದಾರೆ.
ಯಾರೆಲ್ಲಾ ಜೊತೆಯಲ್ಲಿ ತೆರಳಲಿದ್ದಾರೆ?
ಶಿವಣ್ಣ ಅವರ ಜೊತೆಯಲ್ಲಿ ಪತ್ನಿ ಗೀತಾ, ದ್ವಿತೀಯ ಪುತ್ರಿ ನಿವೇದಿತಾ, ವೈದ್ಯರಾದ ಮುರುಗೇಶ್ ಹಾಗೂ ಮನೋಹರ್ ಅವರುಗಳು ತೆರಳಲಿದ್ದಾರೆ. ಡಿ.28ರಂದು ಸಚಿವ ಮಧು ಬಂಗಾರಪ್ಪ ಅವರು ತೆರಳಲಿದ್ದಾರೆ.
ಭಾವುಕರಾದ ಶಿವಣ್ಣ
ಎಲ್ಲರ ಹಾರೈಕೆ ನನ್ನೊಂದಿಗೆ ಇದೆ. ಈ ಬಾರಿಯ ಹೊಸ ವರ್ಷಕ್ಕೆ ಈಗಲೇ ಶುಭ ಹಾರೈಸಿದ ಅವರು, ಡಿ.25ರಂದು ಬಿಡುಗಡೆಯಾಗಲಿರುವ ಸುದೀಪ್ ಅವರ ಮ್ಯಾಕ್ಸ್ ಚಿತ್ರಕ್ಕೆ ಶುಭ ಹಾರೈಸಿದರು.
ಸುದೀಪ್ ಅವರು ತಮ್ಮನ್ನು ಭೇಟಿಯಾಗಿ ಮಾತನಾಡಿದ್ದು ಹಾಗೂ ಶುಭ ಹಾರೈಸಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post