ವರನಟ ಡಾ.ರಾಜ್‌ಕುಮಾರ್ ಅವರ ಇಡಿಯ ಕುಟುಂಬ ಕಲಾಸೇವೆಗೇ ಮೀಸಲಾಗಿದ್ದು, ಅವರ ಮೂವರು ಪುತ್ರರೂ ತೆರೆಯ ಮೇಲೆ ಮಿಂಚಿದ್ದು ಒಂದು ಇತಿಹಾಸವೇ ಆಗಿದೆ. ಈ ಇತಿಹಾಸಕ್ಕೆ ಈಗ ಮತ್ತೊಂದು ಪುಟ ಸೇರಿಕೊಳ್ಳಲಿದೆ.
ಸುಮಾರು 15 ವರ್ಷಗಳಿಂದ ತೆರೆಮರೆಯಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದು, ರಾಜ್ ಕುಟುಂಬದ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಆ.15ರಂದು ರಾಘವೇಂದ್ರ ರಾಜ್‌ಕುಮಾರ್ ಅವರ ಜನ್ಮದಿನವಾಗಿದೆ. ಅಂದೇ ಅಮ್ಮನ ಮನೆಯ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು ಈ ಮೂಲಕ ಮತ್ತೆ ಬೆಳ್ಳಿ ಪರದೆಗೆ ಬರಲು ಸಿದ್ದವಾಗುತ್ತಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.
ನಿಖಿಲ್ ಮಂಜು ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಮೀರ್ ಕುಲಕರ್ಣಿ ಸಂಗೀತ, ಪಿವಿಆರ್ ಸ್ವಾಮಿ ಛಾಯಾಗ್ರಹಣ ನಿರ್ವಹಿಸಲಿದ್ದು, ಆತ್ಮಶ್ರೀ ಹಾಗೂ ಆರ್‌ಎಸ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ.
Discussion about this post