No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
  • Advertise With Us
  • Grievances
  • About Us
  • Contact Us
Thursday, October 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ವಿಜಯಪುರ

ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ

ಸಾಂಸ್ಕೃತಿಕ ವೈಭವದೊಂದಿಗೆ ಪ್ರತಿಭಾವಂತರಿಗೆ ಸನ್ಮಾನ

kalpa News by kalpa News
February 17, 2026
in ವಿಜಯಪುರ
0
ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಜಯಪುರ  |

ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಫೆ.16ರ ಸೋಮವಾರದಂದು ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ರೈಲ್ವೆ ಇಲಾಖೆಯ ಬಂಜಾರ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ರಂಗು ಮತ್ತು ಭಕ್ತಿಭಾವದಿಂದ ಕೂಡಿತ್ತು.

ಕೆಸರಟ್ಟಿ ಶ್ರೀ ಸೋಮಲಿಂಗ ಮಹಾರಾಜ್ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಬೆಳಿಗ್ಗೆ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾದ ಭವ್ಯಮೆರವಣಿಗೆ ಪೊಲೀಸ್ ಸ್ಟೇಷನ್ ಹತ್ತಿರವಿರುವ ರೈಲ್ವೆ ಬ್ರಿಡ್ಜ್’ವರೆಗೆ ಸಾಗಿತು. ಈ ವೇಳೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ರೈಲ್ವೆ ಇಲಾಖೆಯ ಬಂಜಾರ ಸಮುದಾಯದ ಮಕ್ಕಳು ಮತ್ತು ಮಹಿಳೆಯರು, ನೃತ್ಯ ಮೇಳದೊಂದಿಗೆ ಸಾಗಿದ್ದು ಮೆರವಣಿಗೆಗೆ ವಿಶೇಷ ಕಳೆ ತಂದಿತು.
ಮೆರವಣಿಗೆಯ ಮುಕ್ತಾಯದ ನಂತರ, ಸ್ವಾಮೀಜಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ `ಭೋಗ್’ ವಿಧಿವಿಧಾನಗಳನ್ನು ಅತ್ಯಂತ ಭಕ್ತಿಭಾವದಿಂದ ಮತ್ತು ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸೋಮಲಿಂಗ ಮಹಾರಾಜರು, ಸಂತ ಸೇವಾಲಾಲ್ ಅವರು ವಿಶ್ವಕ್ಕೆ ಸಾರಿದ ಉದಾತ್ತ ನುಡಿ ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಸನ್ಮಾರ್ಗದ ಹಾದಿಯಲ್ಲೇ ಎಲ್ಲರೂ ಸಾಗಬೇಕು ಎಂದು ಕರೆ ನೀಡಿದರು.

`ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆಯಂತೆ ಪ್ರತಿಯೊಬ್ಬರೂ ಕಠಿಣ ಪರಿಶ್ರಮದ ಮೂಲಕ ಸ್ವಾವಲಂಬಿ ಬದುಕು ನಡೆಸುವ ಗುಣ ಬೆಳೆಸಿಕೊಳ್ಳಬೇಕು. ಜಾತಿ-ಮತಗಳ ಭೇದವಿಲ್ಲದೆ ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಬಾಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ, ಎಂದು ತಿಳಿಸಿದರು.

ನಿವೃತ್ತ ನಿಲ್ದಾಣ ವ್ಯವಸ್ಥಾಪಕ ಪಿ.ಟಿ. ನಾಯಕ್ ಮಾತನಾಡಿ, ರೈಲ್ವೆ ಕುಟುಂಬದವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಾ ನೆಮ್ಮದಿಯ ಜೀವನ ನಡೆಸಲಿ ಎಂದು ಹಾರೈಸಿದರು.
ಟ್ರೈನ್ ಮ್ಯಾನೇಜರ್ ಪರಶುರಾಮ್ ಚವ್ಹಾಣ ಅವರು ಸೇವಾಲಾಲ್ ಅವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಸ್ತುತ ನಿಲ್ದಾಣ ವ್ಯವಸ್ಥಾಪಕರಾದ ಎಂ.ವೈ. ಪಾಟೀಲ್ ಅವರು ಸಿಬ್ಬಂದಿಗಳಿಗೆ ಶುಭ ಕೋರಿದರು.

ರೈಲ್ವೆ ಬಂಜಾರ ಸಮಾಜದ ಕುಟುಂಬದ ಹೆಮ್ಮೆಯ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಅನೇಸ್ತೇಷಿಯಾದಲ್ಲಿ ಎಂ.ಡಿ. ಪದವಿ ಸಾಧಿಸಿದ ಡಾ. ಕೃತಿಕಾ ನಾಯಕ್, ಡಿಪ್ಲೊಮಾ ಬಿಎಲ್’ಡಿನಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಸೃಷ್ಟಿ ಜಾಧವ್, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಪ್ರಣೀತಾ ಚವ್ಹಾಣ ಹಾಗೂ ಅಂಡರ್-19 ರಾಜ್ಯ ಮಟ್ಟದ ಕ್ರಿಕೆಟ್’ನಲ್ಲಿ ಸಾಧನೆ ತೋರಿದ ಶ್ರೇಯಾ ಚವ್ಹಾಣ ಅವರನ್ನು ವೇದಿಕೆಯ ಮೇಲೆ ಗೌರವಿಸಲಾಯಿತು. ಈ ಸಾಧಕ ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರನ್ನೂ ಸಹ ಸನ್ಮಾನಿಸುವ ಮೂಲಕ, ಇಂದಿನ ತಲೆಮಾರಿನ ಮಕ್ಕಳಿಗೆ ಉನ್ನತ ಸಾಧನೆ ಮಾಡಲು ವಿಶೇಷ ಪ್ರೇರಣೆ ನೀಡಲಾಯಿತು.ಮಹಾಪ್ರಸಾದದ ನಂತರ ಮಕ್ಕಳಿಗಾಗಿ ಮತ್ತು ಕುಟುಂಬದವರಿಗಾಗಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುರ್ಚಿಯಾಟ, ಬಲೂನ್ ಆಟ ಮತ್ತು ಜೋಡಿ ಆಟಗಳಲ್ಲಿ ಮಕ್ಕಳು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡರು.

ರೈಲ್ವೆ ಬಳಗದ ಅಧ್ಯಕ್ಷ ರಾಜ್ ಕುಮಾರ್ ಜಾಧವ್, ಅತಿಥಿಗಳಾದ ವಿ.ಜಿ. ಚವ್ಹಾಣ, ಸಂತೋಷ್ ನಾಯಕ್, ಕೆ.ಎಲ್. ಚಂದ್ರಶೇಖರ್, ಕೆ.ಜಿ. ರಾಠೋಡ್, ಸಂತೋಷ್ ಚವ್ಹಾಣ ಹಾಗೂ ರೈಲ್ವೆ ಇಲಾಖೆಯ ಎಲ್ಲಾ ಸಹೋದ್ಯೋಗಿಗಳು ಕುಟುಂಬ ಸಮೇತ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

https://kalpa.news/wp-content/uploads/2024/04/VID-20240426-WA0008.mp4

Tags: Indian RailwayKannada News WebsiteLatest News NewsSaint Sevalal MaharajVijayapuraಬಂಜಾರರೈಲ್ವೆ ಇಲಾಖೆರೈಲ್ವೆ ನಿಲ್ದಾಣವಿಜಯಪುರಸಂತ ಶ್ರೀ ಸೇವಾಲಾಲ್ ಮಹಾರಾಜಸಾಂಸ್ಕೃತಿಕ ವೈಭವ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಕನ್ಸರ್ವೆನ್ಸಿ ಅಂಚಿನಲ್ಲಿರುವ ಮರಗಳನ್ನು ಸಂರಕ್ಷಿಸಿ | ಪರಿಸರ ಹೋರಾಟಗಾರರ ಆಗ್ರಹ

Next Post

ಭದ್ರಾವತಿ | ಭದ್ರಾ ನದಿಗೆ ನಿರ್ಮಾಣವಾಗಲಿದೆ ನೂತನ ಸೇತುವೆ | ಶಾಸಕ ಸಂಗಮೇಶ್ವರ ಪ್ರಯತ್ನದ ಫಲ

kalpa News

kalpa News

Next Post
ಭದ್ರಾವತಿ | ಭದ್ರಾ ನದಿಗೆ ನಿರ್ಮಾಣವಾಗಲಿದೆ ನೂತನ ಸೇತುವೆ | ಶಾಸಕ ಸಂಗಮೇಶ್ವರ ಪ್ರಯತ್ನದ ಫಲ

ಭದ್ರಾವತಿ | ಭದ್ರಾ ನದಿಗೆ ನಿರ್ಮಾಣವಾಗಲಿದೆ ನೂತನ ಸೇತುವೆ | ಶಾಸಕ ಸಂಗಮೇಶ್ವರ ಪ್ರಯತ್ನದ ಫಲ

Leave a Reply Cancel reply

Your email address will not be published. Required fields are marked *

No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL