ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂ ಬಳಕೆದಾರರಿಗೆ ನೂತನ ರೂಲ್ಸ್ ಜಾರಿ ಮಾಡಿದ್ದು, ಸೆ.18ರಿಂದ ಇದು ಜಾರಿಗೆ ಬರಲಿದೆ. ಏನದು? ಮುಂದೆ ಓದಿ…
ಇನ್ನು ಮುಂದೆ ಎಸ್’ಬಿಐ ಎಟಿಎಂಗಳಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ಹಣ ತೆಗೆಯಬೇಕಾದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್’ಗೆ ಒಟಿಪಿ ಬರುತ್ತದೆ. ಅದನ್ನು ನೀವು ನಮೂದಿಸಿದ ನಂತರವಷ್ಟೇ ಹಣ ತೆಗೆಯಲು ಸಾಧ್ಯ.
ವಾರ ಭವಿಷ್ಯ ನಿಖರ, ವೈಜ್ಞಾನಿಕ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 13.09.2020 ರಿಂದ 19.09.2020
ಈ ಹೊಸ ನಿಯಮ ಎಸ್’ಬಿಐ ಎಟಿಎಂಗಳಲ್ಲಿ ಮಾತ್ರ ಜಾರಿಗೆ ಬರಲಿದ್ದು, ಇಲ್ಲಿ ಗ್ರಾಹಕರು ಹಣ ತೆಗೆಯುವ ವೇಳೆ ಮೊಬೈಲ್ ಸಹ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಲಿದೆ.
ಎಟಿಎಂ ವಂಚಕರನ್ನು ತಡೆಯುವ ನಿಟ್ಟಿನಲ್ಲಿ ಎಸ್’ಬಿಐ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
Get In Touch With Us info@kalpa.news Whatsapp: 9481252093
Discussion about this post