ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸೀಲ್ ಡೌನ್ ಮಾಡಲಾಗಿರುವ ಗ್ರಾಮಾಂತರ ಭಾಗದ ಹಕ್ಕಿ ಪಿಕ್ಕಿ ಕ್ಯಾಂಪಿನ ಜನರು ಅಕ್ಕ ಪಕ್ಕದ ಹಳ್ಳಿಗಳಲ್ಲೂ ಸಹ ಓಡಾಡುತ್ತಿರುವುದನ್ನು ವಿರೋಧಿಸಿದ ಚಿಕ್ಕಮಟ್ಟಿ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೂವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹಕ್ಕಿ ಪಿಕ್ಕಿ ಕ್ಯಾಂಪನ್ನು ಸೀಲ್ ಡೌನ್ ಮಾಡಲಾಗಿತ್ತು. ಹೀಗಾಗಿ, ಹಕ್ಕಿ ಪಿಕ್ಕಿ ಕ್ಯಾಂಪ್’ನವರು ನಮ್ಮ ಗ್ರಾಮಕ್ಕೆ ಬರಬಾರದು ಎಂದು ಚಿಕ್ಕಮಟ್ಟಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಕ್ಕಿಪಿಕ್ಕಿ ಕ್ಯಾಂಪ್ ಜನರು ಎಲ್ಲೆಂದರಲ್ಲಿ ಓಡಾಡುತ್ತಾ, ಬೇರೆ ಗ್ರಾಮಗಳಿಗೂ ತೆರಳುತ್ತಿದ್ದಾರೆ ಎಂದು ಚಿಕ್ಕಮಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲ ಹೀಗೆಲ್ಲಾ ತಿರುಗಾಡಬೇಡಿ. ನಮ್ಮ ಗ್ರಾಮದೊಳಕ್ಕೆ ಬರಬೇಡಿ ಎಂದಿದ್ದಾರೆ. ಆದರೆ, ಈ ವೇಳೆ ಎರಡು ಗ್ರಾಮಸ್ಥರ ನಡುವೆ ವಾಗ್ವಾದ ನಡೆದು, ಚಿಕ್ಕಮಟ್ಟಿ ಗ್ರಾಮಸ್ಥರ ಮೇಲೆ ಹಾಗೂ ಮನೆ-ಕಾರುಗಳ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ವಿರೋಧದಿಂದಾಗಿ ಹಕ್ಕಿ ಪಿಕ್ಕಿ ಕ್ಯಾಂಪ್’ನ ನೂರಾರು ಮಂದಿ ಚಿಕ್ಕಮಟ್ಟಿ ಗ್ರಾಮದ ಜನರ ಮೇಲೆ ಧಾರುಣವಾಗಿ ಹಲ್ಲೆ ನಡೆಸಿ, ಗ್ರಾಮದ ಹಲವು ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸುಮಾರು 15 ಜನರಿಗೆ ಗಾಯಗಳಾಗಿದ್ದು, ಇವರನ್ನೆಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆ ಕುರಿತಂತೆ ಈವರೆಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಿಲ್ಲ.
Get in Touch With Us info@kalpa.news Whatsapp: 9481252093
Discussion about this post