ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇಂದು ಸಹ ಬಹಳಷ್ಟು ಪ್ರಕರಣ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಹೊಸಮನೆ ಒಂದನೆಯ ಕ್ರಾಸ್’ನಲ್ಲಿ 45 ವರ್ಷದ ವ್ಯಕ್ತಿ ಹಾಗೂ 38 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಶರಾವತಿ ನಗರ 1 ನೆಯ ಮುಖ್ಯರಸ್ತೆ, ಚರ್ಚ್ ಬಳಿಯ 25 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇನ್ನು, ಪೆನ್ಷನ್ ಮೊಹಲ್ಲಾ 2 ಕ್ರಾಸ್ ನ ಆಟೋ ಡ್ರೈವರ್’ಗೆ, ಕೀರ್ತಿ ನಗರದ 1 ನೇ ಮುಖ್ಯರಸ್ತೆಯ 58 ವರ್ಷದ ವ್ಯಕ್ತಿಗೆ, ಅಶೋಕನಗರ 6 ನೇ ಕ್ರಾಸ್ 80 ವರ್ಷದ ವೃದ್ಧರೊಬ್ಬರಿಗೆ, ಚೆನ್ನಪ್ಪ ಲೇಔಟ್ 1ನೆಯ ಕ್ರಾಸ್ ನ 47 ವರ್ಷದ ವ್ಯಕ್ತಿಗೆ, ಆರ್’ಎಂ’ಎಲ್ ನಗರದ 19 ನೇ ಕ್ರಾಸ್ ನ 36 ವರ್ಷದ ವ್ಯಕ್ತಿಗೆ, ಗೋಪಾಳದ 43 ವರ್ಷದ ವ್ಯಕ್ತಿಗೆ, ಶರಾವತಿ ನಗರದ ಲೈಬ್ರರಿ ಬಳಿಯ 1 ಕ್ರಾಸ್ ನ ನಿವಾಸಿಗಳಾದ 44 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆಗೆ ಹಾಗೂ ಗಾಂಧಿ ಬಜಾರ್’ನಲ್ಲಿನ 5 ವರ್ಷದ ಮಗುವಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಇನ್ನು, ಈ ಎಲ್ಲ ಪ್ರಕರಣಗಳ ಕುರಿತಾಗಿ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿಯನ್ನು ಇನ್ನೂ ಪ್ರಕಟಿಸಬೇಕಿದ್ದು, ಇಲಾಖೆ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿದೆ. ಹಾಗೆಯೇ, ಆರೋಗ್ಯ ಇಲಾಖೆಗೆ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಈವರೆಗೂ 7 ಮಂದಿ ವೈರಸ್’ಗೆ ಮೃತರಾಗಿದ್ದಾರೆ. ಆದರೆ, ವಾಸ್ತವವಾಗಿ 11 ಮಂದಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಇದಕ್ಕೆ ಸ್ಪಷ್ಟೀಕರಣ ನೀಡಿ ಸಂಶಯ ನಿವಾರಣೆ ಮಾಡಬೇಕಿದೆ.
Get In Touch With Us info@kalpa.news Whatsapp: 9481252093
Discussion about this post