ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಸಂಭ್ರಮದ ನಡುವೆಯೇ, ವಿಜಯದಶಮಿ ಅಂಗವಾಗಿ ನಗರದಲ್ಲಿ ವೈಭವಯುತವಾಗಿ ಪಥಸಂಚಲನ ನಡೆಸಲಾಯಿತು.
ಕೋಟೆ ರಸ್ತೆಯಲ್ಲಿ ಸಂಘದ ಧ್ವಜ ಪ್ರಮುಖ ಕೋ.ನಂ. ರವೀಂದ್ರ ಅವರು ಧ್ವಜಾರೋಹಣ ನೆರವೇರಿಸಿ, ಧ್ವಜ ನಮನ ಸಲ್ಲಿಸಿದಂತ ನಂತರ ಅದ್ದೂರಿ ಪಥ ಸಂಚಲನ ಆರಂಭವಾಯಿತು.ಯಾವ ಮಾರ್ಗದಲ್ಲಿ?
ಕೋಟೆ ರಸ್ತೆಯಿಂದ ಹೊರಟ ಪಥ ಸಂಚಲನ ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ , ಎಎ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಜೈಲ್ ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿತು.
ಯಾರೆಲ್ಲಾ ಪಾಲ್ಗೊಂಡಿದ್ದರು?
ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಶಿವಮೊಗ್ಗ ವಿಭಾಗ ಸಂಘಚಾಲಕ ದಿನೇಶ್ ಭಾರತೀಪುರ, ಜಿ ಸಂಘಚಾಲಕ ಬಿ.ಎ. ರಂಗನಾಥ್, ನಗರ ಸಂಘಚಾಲಕ ಲೋಕೇಶ್ವರರಾವ್ ಕಾಳೆ, ಪ್ರಾಂತ ಘೋಷ್ ಪ್ರಮುಖ ಗಿರೀಶ್, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ವಿಭಾಗ ಸಹ ಕಾರ್ಯವಾಹ ಮಧುಕರ, ವಿಭಾಗ ಪ್ರಚಾರಕ ಭರತ ರಾಜ್, ಜಿಲ್ಲಾ ಕಾರ್ಯವಾಹ ಚೇತನ, ಜಿಲ್ಲಾ ಪ್ರಚಾರಕ ವೀರೇಶ್, ನಗರ ಕಾರ್ಯವಾಹ ವರುಣ್, ನಗರ ಸಹ ಕಾರ್ಯವಾಹ ಕಿರಣ್ ಕಾಂಬ್ಳೆ, ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಸುಮಾರು 5000 ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇನ್ನು, ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು, ದೇಶಾಭಿಮಾನಿಗಳು ನಿಂತು ಪಥ ಸಂಚಲನ ವೀಕ್ಷಿಸಿದರು.
ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಪ್ರಮುಖವಾಗಿ, ವೃತ್ತಗಳಲ್ಲಿ ಬೃಹತ್ ರಂಗೋಲಿಗಳನ್ನು ಸಿಂಗರಿಸಿದ್ದು, ಸಂಘಕ್ಕೆ 100 ವರ್ಷ ತುಂಬಿದ ಚಿತ್ರ ಗಮನ ಸೆಳೆಯಿತು.
ಇನ್ನು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಉದ್ದಕ್ಕೂ ಕಾರ್ಯಕರ್ತರ ಮೇಲೆ ಸಾವಿರಾರು ಸಾರ್ವಜನಿಕರು ಅಪಾರ ಪ್ರಮಾಣದಲ್ಲಿ ಪುಷ್ಪವೃಷ್ಠಿ ಮಾಡಿದರು. ಅಲ್ಲದೇ, ಹಲವು ಕಡೆಗಳಲ್ಲಿ ಸಾಂಪ್ರದಾಯಿಕವಾಗಿ ಆರತಿ ಬೆಳಗಿ ಸ್ವಾಗತಿಸಿ, ಹರಸಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post