ನವದೆಹಲಿ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಖ್ಯಾತಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಏಕತಾ ಪ್ರತಿಮೆಯ ವಿಭಿನ್ನ ಫೋಟೋಗಳನ್ನು ನೀವು ನೋಡಿದ್ದೀರಿ. ಆದರೆ, ಈಗ ಈ ಪ್ರತಿಮೆ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದು ನೋಡುವ ಅವಕಾಶ ದೊರೆತಿದೆ.
ಹೌದು… ಅಮೆರಿಕಾದ ಸ್ಕೈಸ್ಟಾಟ್ ಎಂಬ ಸಂಸ್ಥೆ ಏಕತಾ ಪ್ರತಿಮೆಯ ಚಿತ್ರವನ್ನು ಬಾಹ್ಯಾಕಾಶದಿಂದ ಸೆರೆ ಹಿಡಿದಿದ್ದು, ಇದರ ಅದ್ಬುತ ದೃಶ್ಯ ದೇಶದ ಹೆಮ್ಮೆಯನ್ನು ಮತ್ತಷ್ಟು ಉನ್ನತಿಗೆ ಏರಿಸಿದೆ.
At 597 feet, India’s Statue of Unity is now the tallest statue in the world and clearly seen from space! Oblique SkySat image captured today, November 15, 2018. pic.twitter.com/FkpVoHJKjw
— Planet (@planetlabs) November 15, 2018
ಏಕೀಕರಣಕ್ಕಾಗಿ ಶ್ರಮಿಸಿದ, ಅಪ್ರತಿಮ ಹೋರಾಟಗಾದ ಪಟೇಲ್ ಜೀ ಅವರ 142ನೆಯ ಜನ್ಮ ದಿನವಾದ ಅ.31ರಂದು ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಬೇಕು ಎಂದು ಮೋದಿ ಕನಸು ಕಂಡಿದ್ದರು. ಅದರಂತೆ ಇಂದು ಗಣರಾಜ್ಯೋತ್ಸವ ಮಾದರಿಯಲ್ಲಿ ಅದ್ದೂರಿ ಕಾರ್ಯಕ್ರಮದೊಂದಿಗೆ ಪ್ರತಿಮೆ ಲೋಕಾರ್ಪಣೆಗೊಂಡಿತು.
ಪ್ರತಿಮೆಯ ವಿಶೇಷತೆಯೇನು?
ಎತ್ತರ: 182 ಮೀಟರ್
ಕಂಚು: 1850 ಟನ್
ಉಕ್ಕು: 24,200 ಟನ್
ಸಿಮೆಂಟ್: 22,500 ಟನ್
ಯೋಜನಾ ವೆಚ್ಚ: 2989 ಕೋಟಿ ರೂ.
ಇಂಜಿನೀಯರ್ ಗಳು: 300
ನಿರ್ಮಾಣದ ಕಾರ್ಮಿಕರು: 3000
ನಿರ್ವಹಣೆ: ಎಲ್ ಅಂಡ್ ಟಿ ಕಂಪೆನಿ
Discussion about this post