ಕಾರ್ಕಳ: ಸಾಮಾನ್ಯವಾಗಿ ಯುವಕರು ಎಂದರೆ ಮೋಜು, ಮಸ್ತಿಯಲ್ಲೇ ಕಾಲಹರಣ ಮಾಡುವವರು ಹೆಚ್ಚು. ಸಮಾಜಮುಖಿ ಕಾರ್ಯಗಳು ಎಂದರೆ ನಿರ್ಲಕ್ಷ ತೋರುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಸೇವೆ ಸಲ್ಲಿಸುತ್ತಿರುವ ತಂಡ ನಮೋ ಬಳಗ ಬಹರೈನ್.
ನಮೋ ಬಳಗ ಬಹರೈನ್ ಎಂಬ ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಯುವಕರ ತಂಡ, ಇದರ ಭಾಗವಾಗಿ ವಿಶೇಷ ಶಾಲೆಯೊಂದಕ್ಕೆ ದೇಣಿಗೆ ನೀಡಿದೆ.
ಕಾರ್ಕಳದ ವಿಜೇತ ವಿಶೇಷ ಶಾಲೆಗೆ ಸಹಕಾರ ನೀಡುವ ಉದ್ದೇಶದಿಂದ ದೊಡ್ಡ ಮೊತ್ತದಲ್ಲಿ ದೇಣಿಗೆ ಸಂಗ್ರಹಿಸಿ ಶಾಲೆಗೆ ನೀಡಿದ್ದಾರೆ.
ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಇವರ ಮೂಲಕ ದೇಣಿಗೆಯನ್ನು ಇತ್ತೀಚೆಗೆ ಶಾಲೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಮೋ ಬಳಗ ಬಹರೈನ್ ಇದರ ವತಿಯಿಂದ ಸುಧೀರ್ ಶೆಟ್ಟಿ ಎಣ್ಣೆಹೊಳೆ, ಸಚಿಂದ್ರ ನಾಯಕ್, ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ವಿನಯ್ ಶೆಟ್ಟಿ, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.
Discussion about this post