ನವದೆಹಲಿ: ಶಬರಿಮಲೆಯಲ್ಲಿ ಸಂಘ ಪರಿವಾರ ಹಾಗೂ ಹಿಂದೂ ಮುಖಂಡರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಇಂದು ಕೇರಳ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಕುರಿತಂತೆ ವಿಎಚ್‌ಪಿ ರಾಜ್ಯಾಧ್ಯಕ್ಷ ಎಸ್.ಆರ್.ಆರ್. ಕುಮಾರ್ ಮಾತನಾಡಿದ್ದು, ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷ ಕೆ.ಪಿ. ಶಶಿಕಾಳ ಅವರನ್ನು ಶಬರಿಮಲೆ ಬಳಿ ಮರವಕ್ಕಂನ ಬಳಿ ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
Kerala: Lord Ayyappa devotees begin the trek from Pampa to #SabarimalaTemple. The temple opened yesterday for 62-day long Mandala Pooja-Magaravilaku annual pilgrimage season. pic.twitter.com/CKW3KX5f30
— ANI (@ANI) November 17, 2018
ಈ ಹಿನ್ನೆಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಿನ್ನೆಯಿಂದ ದೇವಾಲಯ ತೆರೆದಿದ್ದು, ಎರಡು ತಿಂಗಳುಗಳ ಕಾಲ ತೆರೆದಿರಲಿದೆ.
ಇನ್ನೊಂದೆಡೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತೃಪ್ತಿ ದೇಸಾಯಿ ಹಾಗೂ ತಂಡಕ್ಕೆ ನಿಲ್ದಾಣದಲ್ಲೇ ತಡೆ ಹಿಡಿಯಲಾಗಿತ್ತು. ಸುಮಾರು 14 ಗಂಟೆಗಳ ಕಾಲ ಅಲ್ಲೇ ತಂಗಿದ್ದು, ಕೊನೆಗೆ ಯಾವುದೇ ರೀತಿಯಿಂದಲೂ ಮುಂದಕ್ಕೆ ತೆರಳಲಾಗದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಪೂನಾಗೆ ಹಿಂತಿರುಗಿದರು.
ಅನಿವಾರ್ಯವಾಗಿ ಪೂನಾಗೆ ಹಿಂತಿರುಗಿದ ತೃಪ್ತಿ ದೇಸಾಯಿ ಹಾಗೂ ತಂಡಕ್ಕೆ ಪೂನಾ ವಿಮಾನ ನಿಲ್ದಾಣದಲ್ಲೂ ಸಹ ಘೆರಾವ್ ಹಾಕಲಾಯಿತು. ಮಹಾರಾಷ್ಟ್ರದ ಅಯ್ಯಪ್ಪ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೂನಾ ವಿಮಾನ ನಿಲ್ದಾಣದಲ್ಲಿ ಘೆರಾವ್ ಹಾಕಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Maharashtra: Protesters gather outside Mumbai airport where Trupti Desai, the founder of Bhumata Brigade, has arrived. She was at the Cochin International airport, Kerala for the entire day yesterday as protesters did not allow her to proceed to #SabarimalaTemple. pic.twitter.com/JNMQUtzJMk
— ANI (@ANI) November 16, 2018
ತೃಪ್ತಿಗೆ ಹಾಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲೇ ಬೇಕು ಎಂಬ ಇಚ್ಛೆ ಇದ್ದರೆ ಆಕೆಗೆ 50 ವರ್ಷ ತುಂಬಿದ ಮೇಲೆ ನಿಯಮದಂತೆ ಶಬರಿಮಲೆಗೆ ತೆರೆಳಿ ದರ್ಶನ ಪಡೆಯಲಿ ಎಂದು ಕಿಡಿ ಕಾರಿದರು.
We've come here to protest. Trupti Desai should try going there after attaining 50 yrs of age¬ before that. She won't be allowed to step inside the temple before that. There are so many devotees working towards this & stopping other women too: Protesters outside Mumbai airport pic.twitter.com/50FHd7BYP4
— ANI (@ANI) November 16, 2018
Discussion about this post