No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

2026ರಲ್ಲಿ ವೃತ್ತಿಜೀವನದ ಬೆಳವಣಿಗೆಗೆ ನೆರವಾಗುವ ಬೆಂಗಳೂರಿನ ಪ್ರಮುಖ 10 ಕಂಪನಿಗಳ ಪಟ್ಟಿ ಪ್ರಕಟಿಸಿದ ಲಿಂಕ್ಡ್‌ ಇನ್

kalpa News by kalpa News
May 20, 2026
in Special Articles
1
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಭಾರತ |

ವಿಶ್ವದ ಅತಿ ದೊಡ್ಡ ವೃತ್ತಿಪರ ನೆಟ್‌ ವರ್ಕ್ ಆಗಿರುವ ಲಿಂಕ್ಡ್‌ ಇನ್, Linkedin ಬೆಂಗಳೂರಿನ ವೃತ್ತಿಪರರು 2026ರಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಪೂರಕವಾಗಿರುವ ಹತ್ತು ಪ್ರಮುಖ ಕಂಪನಿಗಳ ಪಟ್ಟಿಯನ್ನು ಇಂದು ಅನಾವರಣಗೊಳಿಸಿದೆ. ಲಿಂಕ್ಡ್‌ ಇನ್ ಪ್ಲಾಟ್‌ ಫಾರ್ಮ್‌ ನಲ್ಲಿರುವ ಲಕ್ಷಾಂತರ ವೃತ್ತಿಪರರ ಚಟುವಟಿಕೆ ಮತ್ತು ದತ್ತಾಂಶ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಭಾರತದ ಅತ್ಯಂತ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಬೆಳವಣಿಗೆಗೆ ಆದ್ಯತೆ ನೀಡುವ ಸಂಸ್ಥೆಗಳನ್ನು ಈ ಪಟ್ಟಿಯಲ್ಲಿ ಗುರುತಿಸಲಾಗಿದೆ.

ರಾಷ್ಟ್ರೀಯ ಮಟ್ಟದ ಪ್ರಮುಖ ಕಂಪನಿಗಳ ಪಟ್ಟಿ ಬಿಡುಗಡೆ ಈಗ ಯಶಸ್ವಿ 10ನೇ ವರ್ಷಕ್ಕೆ ಕಾಲಿಟ್ಟಿದ್ದು, ಬದಲಾಗುತ್ತಿರುವ ಉದ್ಯಮಗಳು, ಹೊಸ ಉದ್ಯೋಗಾವಕಾಶಗಳು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಕೌಶಲ್ಯಗಳ ಬೇಡಿಕೆಗೆ ತಕ್ಕಂತೆ ಇಂದಿನ ಉದ್ಯೋಗ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ವರದಿ ಸ್ಪಷ್ಟಪಡಿಸುತ್ತದೆ. ಪ್ರಗತಿ ಸಾಧಿಸುವ ಸಾಮರ್ಥ್ಯ, ಕೌಶಲ್ಯದ ಬೆಳವಣಿಗೆ, ಬಾಹ್ಯ ಅವಕಾಶಗಳು ಮತ್ತು ಕಂಪನಿಯೊಂದಿಗಿನ ಬಾಂಧವ್ಯ ಸೇರಿದಂತೆ ಎಂಟು ಪ್ರಮುಖ ಮಾನದಂಡಗಳ ಲಿಂಕ್ಡ್‌ ಇನ್ ಡೇಟಾ ಆಧಾರದಿಂದ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದು ಯಾವುದೇ ಹಂತದಲ್ಲಿರುವ ವೃತ್ತಿಪರರಿಗೆ ಒಂದು ಉಪಯುಕ್ತ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
ಈ ಕುರಿತು ಮಾತನಾಡುವ ಲಿಂಕ್ಡ್‌ ಇನ್‌ ನ ಕೆರಿಯರ್ ಎಕ್ಸ್ ಪರ್ಟ್ ಹಾಗೂ ಭಾರತದ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆಗಿರುವ ನಿರಾಜಿತಾ ಬ್ಯಾನರ್ಜಿ ಅವರು , “ಬೆಂಗಳೂರು ದೀರ್ಘಕಾಲದಿಂದಲೂ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧಿಯಾಗಿದೆ. ಆದರೆ ಈ ವರ್ಷದ ದತ್ತಾಂಶವನ್ನು ಗಮನಿಸಿದರೆ, ಈ ನಗರವು ಕ್ರಮೇಣ ಹಣಕಾಸು ಸೇವೆಗಳ ಕೇಂದ್ರವಾಗಿಯೂ ರೂಪಾಂತರಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಈ ಬಾರಿಯ ಪಟ್ಟಿಯಲ್ಲಿ ನಾಲ್ಕು ತಂತ್ರಜ್ಞಾನ ಕಂಪನಿಗಳು ಮತ್ತು ನಾಲ್ಕು ಬಿಎಫ್‌ಎಸ್‌ಐ ಸಂಸ್ಥೆಗಳು ಸ್ಥಾನ ಪಡೆದಿದ್ದು, ಉದ್ಯೋಗದಾತರು ಕೋಡಿಂಗ್ ಮತ್ತು ವಾಣಿಜ್ಯದ ಫಲಿತಾಂಶಗಳು ಎರಡನ್ನೂ ಅರ್ಥಮಾಡಿಕೊಳ್ಳುವ ಅಭ್ಯರ್ಥಿಗಳಿಗಾಗಿ ಹುಡುಕುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಈಗ ತಾಂತ್ರಿಕ ಮತ್ತು ಮಾನವೀಯ ಕೌಶಲ್ಯಗಳ ಮಿಶ್ರಣದ ಮೇಲೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನ ಮತ್ತು ವ್ಯವಹಾರ ಎರಡರ ಭಾಷೆಯನ್ನೂ ಬಲ್ಲ ವೃತ್ತಿಪರರಿಗೆ ಮುಂಬರುವ ದಿನಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರಲಿದೆ,” ಎಂದು ತಿಳಿಸಿದ್ದಾರೆ.

Also read: “ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

ಬೆಂಗಳೂರಿನಲ್ಲಿ ತಂತ್ರಜ್ಞಾನ ಮತ್ತು ಹಣಕಾಸು ವಲಯಕ್ಕೆ ಸಮಾನ ಮನ್ನಣೆ

ಬೆಂಗಳೂರಿನ ‘ಟಾಪ್ ಕಂಪನಿಗಳು 2026’ರ ಪಟ್ಟಿಯು ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳ ನಡುವಿನ ಸಮಾನ ಪೈಪೋಟಿಗೆ ಸಾಕ್ಷಿಯಾಗಿದೆ. ಬಿಎಫ್‌ಎಸ್‌ಐ ವಲಯದಿಂದ ಜೆಪಿ ಮಾರ್ಗನ್ ಚೇಸ್ (#1), ಮಾರ್ಗನ್ ಸ್ಟಾನ್ಲಿ (#2) ಮತ್ತು ವೆಲ್ಸ್ ಫಾರ್ಗೋ (#5) ಕಂಪನಿಗಳು ಮುಂಚೂಣಿಯಲ್ಲಿದ್ದರೆ, ತಂತ್ರಜ್ಞಾನ ವಲಯದಲ್ಲಿ ಐಬಿಎಂ (#3), ಅಮೆಜಾನ್ (#4) ಮತ್ತು ಎಸ್‌ಎಪಿ (#8) ಕಂಪನಿಗಳು ಅಗ್ರ ಸ್ಥಾನಗಳಲ್ಲಿವೆ.

ಇಷ್ಟೇ ಅಲ್ಲದೆ, ಔಷಧ ಉತ್ಪಾದನಾ ವಲಯದ ಎಲಿ ಲಿಲ್ಲಿ ಅಂಡ್ ಕಂಪನಿ (#9) ಮತ್ತು ಆಟೊಮೇಷನ್ ಯಂತ್ರೋಪಕರಣಗಳ ಉತ್ಪಾದನಾ ವಲಯದ ಷ್ನೀಡರ್ ಎಲೆಕ್ಟ್ರಿಕ್ (#10) ಸಂಸ್ಥೆಗಳಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡುವ ಮೂಲಕ, ಬೆಂಗಳೂರು ಈ ಎರಡೂ ವಿಶಿಷ್ಟ ವಲಯಗಳನ್ನು ಒಳಗೊಂಡ ದೇಶದ ಏಕೈಕ ಮೆಟ್ರೋ ನಗರವಾಗಿ ಹೊರಹೊಮ್ಮಿದೆ.
ರಾಷ್ಟ್ರೀಯ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಬೆಂಗಳೂರಿನದ್ದೇ ಹವಾ

ದೇಶದ ಎಲ್ಲಾ ಮೆಟ್ರೋ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನ ಪ್ರಾದೇಶಿಕ ಪಟ್ಟಿಯು ರಾಷ್ಟ್ರೀಯ ಶ್ರೇಯಾಂಕದೊಂದಿಗೆ ಅತ್ಯಂತ ಬಲವಾದ ಹೊಂದಾಣಿಕೆಯನ್ನು ಪ್ರದರ್ಶಿಸಿದೆ. ಬೆಂಗಳೂರಿನ ಟಾಪ್ 10 ಕಂಪನಿಗಳ ಪೈಕಿ ಎಂಟು ಸಂಸ್ಥೆಗಳು ಲಿಂಕ್ಡ್‌ ಇನ್‌ ನ ಭಾರತದ ‘25 ಪ್ರಮುಖ ಕಂಪನಿಗಳ’ ಒಟ್ಟಾರೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿ. ಬೆಂಗಳೂರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೆಪಿ ಮಾರ್ಗನ್ ಚೇಸ್ ರಾಷ್ಟ್ರೀಯ ಮಟ್ಟದಲ್ಲಿ 4ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನಲ್ಲಿ 2ನೇ ಸ್ಥಾನದಲ್ಲಿರುವ ಮಾರ್ಗನ್ ಸ್ಟಾನ್ಲಿ ರಾಷ್ಟ್ರ ಮಟ್ಟದಲ್ಲಿ 17ನೇ ಸ್ಥಾನದಲ್ಲಿದೆ. ಹಾಗೆಯೇ, ಬೆಂಗಳೂರಿನಲ್ಲಿ 3ನೇ ಸ್ಥಾನದಲ್ಲಿರುವ ಐಬಿಎಂ ಕಂಪನಿಯು ರಾಷ್ಟ್ರೀಯ ಶ್ರೇಯಾಂಕದಲ್ಲಿ 6ನೇ ಸ್ಥಾನವನ್ನು ಅಲಂಕರಿಸಿದೆ.

ಇಂತಹ ಪ್ರಮುಖ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ನಿರಾಜಿತಾ ಅವರು ನೀಡಿರುವ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ:

  • ನಿಮ್ಮ ಲಿಂಕ್ಡ್‌ ಇನ್ ಪ್ರೊಫೈಲ್ ಮಾತನಾಡಲಿ: ಪ್ರಮುಖ ಕಂಪನಿಗಳ ರಿಕ್ರೂಟರ್‌ ಗಳು (ನೇಮಕಾತಿದಾರರು) ನಿರಂತರವಾಗಿ ಪ್ರತಿಭೆಗಳ ಹುಡುಕಾಟದಲ್ಲಿರುತ್ತಾರೆ. ಆದ್ದರಿಂದ ನಿಮ್ಮ ತಾಂತ್ರಿಕ ಹಾಗೂ ಮಾನವೀಯ ಕೌಶಲ್ಯಗಳು ಪ್ರೊಫೈಲ್‌ ನಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಗಮನ ಹರಿಸಿ ಮತ್ತು ಅವುಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಿ. ಮಾರುಕಟ್ಟೆಯ ಇಂದಿನ ಟ್ರೆಂಡ್‌ ಗಿಂತ ಒಂದು ಹೆಜ್ಜೆ ಮುಂದೆ ಇರಲು ಲಿಂಕ್ಡ್‌ ಇನ್ ಲರ್ನಿಂಗ್ ನಿಮಗೆ ಸಹಾಯ ಮಾಡುತ್ತದೆ.
  • ಸರಿಯಾದ ಉದ್ಯೋಗಗಳಿಗೆ ಮಾತ್ರ ಅರ್ಜಿ ಸಲ್ಲಿಸಿ: ನೂರಾರು ಕಂಪನಿಗಳಿಗೆ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವ ಕಡೆ ಗಮನ ಹರಿಸಿ. ಲಿಂಕ್ಡ್‌ ಇನ್ ಜಾಬ್ ಮ್ಯಾಚ್ ಫೀಚರ್ ನಿಮ್ಮ ಕೌಶಲ್ಯಗಳಿಗೆ ಯಾವ ಉದ್ಯೋಗಗಳು ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೊಪ್ಪುವ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಸಮಯ ಮೀಸಲಿಡಬಹುದು.
  • ನಿಮ್ಮ ನೆಟ್‌ ವರ್ಕ್ ನಿಮ್ಮ ಸಂಪತ್ತು: ನೀವು ಇಷ್ಟಪಡುವ ಕಂಪನಿಗಳ ಪ್ರಸ್ತುತ ಮತ್ತು ಹಳೆಯ ಉದ್ಯೋಗಿಗಳೊಂದಿಗೆ ಉತ್ತಮ ವೃತ್ತಿಪರ ಬಾಂಧವ್ಯ ಬೆಳೆಸಿಕೊಳ್ಳಿ, ಅವರ ಪೋಸ್ಟ್‌ ಗಳೊಂದಿಗೆ ಸಂವಹನ ನಡೆಸಿ. ಹೀಗೆ ಉದ್ದೇಶಪೂರ್ವಕವಾಗಿ ನಿಮ್ಮ ನೆಟ್‌ ವರ್ಕ್ ವಿಸ್ತರಿಸಿಕೊಳ್ಳುವುದರಿಂದ, ನಿಮಗೇ ತಿಳಿಯದಂತೆ ಇರುವ ಹೊಸ ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು.
  • ಯೋಜನಾಬದ್ಧವಾಗಿರಿ ಮತ್ತು ಪ್ರಯತ್ನವನ್ನು ಮುಂದುವರಿಸಿ: ಉನ್ನತ ಕಂಪನಿಗಳು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ, ಆದರೆ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಸಲ್ಲಿಸಿದ ಅರ್ಜಿಗಳನ್ನು ನಿರಂತರವಾಗಿ ಗಮನಿಸುತ್ತಿರಿ (ಟ್ರ್ಯಾಕ್ ಮಾಡಿ), ಫಾಲೋ-ಅಪ್‌ ಗಳನ್ನು ಯೋಜಿಸಿ ಮತ್ತು ಆ ಕಂಪನಿಗಳಲ್ಲಿ ನಿಮಗೆ ಮನ್ನಣೆ ಸಿಗುವಂತೆ ಮಾಡಬಲ್ಲ ನಿಮ್ಮ ಪರಿಚಯಸ್ಥರನ್ನು (ನೆಟ್‌ ವರ್ಕ್) ಸಂಪರ್ಕದಲ್ಲಿಟ್ಟುಕೊಳ್ಳಿ.

2026ರ ಬೆಂಗಳೂರಿನ ಟಾಪ್ 10 ಪ್ರಮುಖ ಕಂಪನಿಗಳ ಪಟ್ಟಿ:

  1. ಜೆ ಪಿ ಮಾರ್ಗನ್ ಚೇಸ್
  2. ಮಾರ್ಗನ್ ಸ್ಟಾನ್ಲಿ
  3. ಐಬಿಎಂ
  4. ಅಮೆಜಾನ್
  5. ವೆಲ್ಸ್ ಫಾರ್ಗೋ
  6. ಎಚ್ ಎಸ್ ಬಿ ಸಿ
  7. ಜಂಪ್ ಕ್ಲೌಡ್
  8. ಎಸ್ಎಪಿ
  9. ಎಲಿ ಲಿಲ್ಲಿ ಆಂಡ್ ಕಂಪನಿ
  10. ಷ್ನೀಡರ್ ಎಲೆಕ್ಟ್ರಿಕ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: IndiaKannada NewsKannada News LiveKannada News OnlineKannada News WebsiteKannada WebsiteLatest News KannadaLinkedInNews in KannadaNews Kannadaಭಾರತ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

“ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

Next Post

ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ! ಎಷ್ಟು ದಿನ? ಕಾರಣವೇನು?

kalpa News

kalpa News

Next Post
ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ! ಎಷ್ಟು ದಿನ? ಕಾರಣವೇನು?

ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ! ಎಷ್ಟು ದಿನ? ಕಾರಣವೇನು?

Comments 1

  1. Pingback: ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ! ಎಷ್ಟು ದಿನ? ಕಾರಣವೇನು? » kalpa.news

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL