ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ಕಾಂಗ್ರೆಸ್ ಹಿಂದಿನಿಂದಲೂ ಪರೋಕ್ಷ ಬೆಂಬಲ ನೀಡುತ್ತಿದೆಯೇ ಎಂಬ ಅನುಮಾನ ಈಗ ಮತ್ತೆ ವ್ಯಕ್ತವಾಗಿದೆ. ಹೌದು… ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರ ನಿಲುವು ಇಂತಹ ಅನುಮಾನಗಳನ್ನು ಹುಟ್ಟು ಹಾಕಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಸೈಫುದ್ದೀನ್ ಸೋಜ್ ಇಂತಹದ್ದೊಂದು ಹೇಳಿಕೆ ನೀಡಿದ್ದು, ಪಾಕ್ ಸರ್ವಾಧಿಕಾರಿಯಾಗಿದ್ದ ಪವೇಜ್ ಮುಷರಫ್ ಅವರ ನಿಲುವುಗಳು ಸರಿಯಾಗಿತ್ತು. ಅವರಂತೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬಯಸುತ್ತಾರೆ ಎಂಬ ವಿವಾದಾತ್ಮಕ ನಿಲುವನ್ನು ಹೊರಹಾಕಿದ್ದಾರೆ.
ಸೈಫುದ್ದೀನ್ ಬರೆದಿರುವ Kashmir: Glimpses of History and the Story of Struggle ಪುಸ್ತಕವನ್ನು ಮುಂದಿನ ವಾರ ಬಿಡುಗಡೆ ಮಾಡಲಿದ್ದು, ಈ ಪುಸ್ತಕದಲ್ಲಿ ಇಂತಹ ನಿಲುವನ್ನು ದಾಖಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿಮಾಡಿದೆ.
ಕಾಶ್ಮೀರವನ್ನು ಪಾಕಿಸ್ಥಾನದೊಂದಿಗೆ ಸೇರಿಸುವುದು ಸರಿಯಲ್ಲ. ಬದಲಾಗಿ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕು ಎಂದು ಬಯಸಿದ್ದರು. ಈ ಚಿಂತನೆ ಸರಿಯಾಗಿದ್ದು, ಇಂದಿಗೂ ಸಹ ಅದೇ ಅಭಿಪ್ರಾಯ ಸರಿಯಾಗಿದೆ. ನಾನೂ ಸಹ ಅದನ್ನೇ ಹೇಳುತ್ತೇನೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲದ ವಿಚಾರ ಎಂದಿದ್ದಾರೆ.
ಇನ್ನು, ಮುಷರಫ್ ತಮ್ಮ ಈ ಅಭಿಪ್ರಾಯವನ್ನು 2007ರಲ್ಲಿ ಪಾಕಿಸ್ಥಾನದ ಉನ್ನತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರು.
ಇಂಡಿಯನ್ ಎಕ್‌ಸ್ ಪ್ರೆಸ್ ವರದಿಯಂತೆ ಕಾಶ್ಮೀರದ ಸಮಸ್ಯೆಗೆ 1953ರಿಂದಲೂ ಸರ್ಕಾರಗಳು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎಂಬ ಅಂಶವನ್ನೂ ಸಹ ಸೋಜ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Discussion about this post