ನವದೆಹಲಿ: ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್‍ಗೆ ಹಿಸ್ಸಾರ್ ಕೊಲೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿ ಹರಿಯಾಣದ ಹಿಸ್ಸಾರ್ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಪ್ರಕರಣ ಕುರಿತಂತೆ ಇಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ, 67 ವರ್ಷ ವಯಸ್ಸಿನ ರಾಮ್ ಪಾಲ್‍ಗೆ ಜೀವಾವಧಿ ಶಿಕ್ಷೆ ಘೋಷಣೆ ಮಾಡುವ ಮೂಲಕ ಮಹತ್ವ ತೀರ್ಮಾನವನ್ನು ಪ್ರಕಟಿಸಿದೆ.
ರಾಮ್ ಪಾಲ್ ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು 2014ರ ನವೆಂಬರ್ 19ರಂದು ದಾಖಲಾಗಿತ್ತು. ಎರಡನೆಯ ಪ್ರಕರಣವು ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟಿದೆ.
ಅಲ್ಲದೇ, ರಾಮ್ ಪಾಲ್ ವಿರುದ್ಧ ಕೊಲೆ, ಕೊಲೆಗೆ ಯತ್ನ, ಪಿತ್ತೂರಿ, ಅಕ್ರಮವಾಗಿ ಶಸ್ತ್ರಾಸ್ತ್ರ ಶೇಖರಣೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳು ದಾಖಲಾಗಿದ್ದವು. ಇಂದಿನ ತೀರ್ಪಿನಿಂದ ಗಲಭೆ ಉಂಟಾಗಬಹುದೆಂದು ಎಲ್ಲಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
Discussion about this post