ಕಲ್ಪ ಮೀಡಿಯಾ ಹೌಸ್ | ಸಾಗರ/ಸೊರಬ |
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಸ್’ನಿಂದ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಒಂದೇ ದಿನ ಜಿಲ್ಲೆಯಲ್ಲಿ ನಡೆದಿದೆ.
Also Read: ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿರುವ ರ‍್ಯಾಲಿ ಸ್ಥಳದಿಂದ 12 ಕಿಮೀ ದೂರದಲ್ಲಿ ಸ್ಪೋಟ: ಆತಂಕ
ಘಟನೆ-1 ಸೊರಬ
ಪ್ರಯಾಣಿಕರೊಬ್ಬರು ಬಸ್’ನಿಂದ ಇಳಿಯುವ ವೇಳೆ ಬಸ್ ಚಲಿಸಿದ ಪರಿಣಾಮ ಕೆಳಕ್ಕೆ ಬಿದ್ದು ಫಕೀರಪ್ಪ ಎನ್ನುವವರು ಸಾವನ್ನಪ್ಪಿದ್ದಾರೆ.
ಶಿಕಾರಿಪುರದಿಂದ ಹೊರಟಿದ್ದ ಬಸ್’ನಿಂದ ಇವರು ಸೊರಬ ತಾಲೂಕಿನ ಹಿರೇಕಬ್ಬೂರ ಗ್ರಾಮದಲ್ಲಿ ಇಳಿಯುವ ವೇಳೆ ಬಸ್ ಚಲಿಸಿದೆ. ಅವರು ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ಬಸ್ ಚಾಲಕನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗಿದೆ.
ಘಟನೆ-2 ಸಾಗರ
ಬಸ್’ನಿಂದ ಇಳಿಯಲು ನಿಂತಿದ್ದ ಪ್ರಯಾಣಿಕನೋರ್ವ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸಂಜೀವಿನ ಆಸ್ಪತ್ರೆ ಬಳಿಯಲ್ಲಿ ನಡೆದಿದೆ.
ಬಸ್ ನಿಲ್ದಾಣದ ಬಳಿ ಇಳಿಯಲು ಬಾಗಿಲ ಬಳಿಯಲ್ಲಿ ಮಹಾದೇವ ನಾಯ್ಕ ಎನ್ನುವವರು ನಿಂತಿದ್ದರು. ಆದರೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















