ಗುರುಗ್ರಾಮ: ಇಲ್ಲಿನ ಏಳು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ನಿರ್ಮಾಣ ಹಂತದಲ್ಲಿದ್ದ ಬೃಹತ್ ಕಟ್ಟದ ನಿನ್ನೆ ರಾತ್ರಿ ಕುಸಿದುಬಿದ್ದಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಏಳು ಮೃತದೇಗಳನ್ನು ಹೊರತೆಗೆಯಲಾಗಿದೆ.
ಈ ಕುರಿತಂತೆ ಗುರುಗ್ರಾಮ ಮುಖ್ಯ ಅಗ್ನಿಶಾಮಕ ಅಧಿಕಾರಿ ಇಸ್ಹಮ್ ಸಿಂಗ್ ಮಾತನಾಡಿದ್ದು, ನಾಲ್ಕನೆ ಅಂತಸ್ತುಗೆ ಕಾಂಕ್ರೀಟ್ ಛಾವಣಿ ಕಟ್ಟಿದ ಅರೆ ನಿರ್ಮಿತ ಮೂರು ಅಂತಸ್ತಿನ ಕಟ್ಟಡವು ಕುಸಿದಿದೆ. ಇದರಿಂದಾಗಿ ಇಡೀ ಕಟ್ಟಡವು ಕುಸಿದಿದೆ ಎಂದಿದ್ದಾರೆ.
ಎನ್’ಡಿಆರ್’ಎಫ್ ಹಾಗೂ ಎಸ್’ಡಿಆರ್’ಎಫ್ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ.

















