ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ ಸಜ್ಜಾಗಿರುವ ಬೆನ್ನಲ್ಲೇ, ನವದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಇಬ್ಬರು ಜೈಷ್ ಎ ಮೊಹಮದ್ ಸಂಘಟನೆಯ ಉಗ್ರರನ್ನು ಬಂಧಿಸಿರುವ ಮಹತ್ವದ ಘಟನೆ ನಡೆದಿದೆ.
ರಾಷ್ಟ ರಾಜಧಾನಿ ನವದೆಹಲಿ ಪೊಲೀಸರು ಇಬ್ಬರು ಉಗ್ರರನ್ನು ಇಂದು ಬಂಧಿಸಿದ್ದು, ಆರೋಪಿಗಳನ್ನು ಜಮ್ಮು ಕಾಶ್ಮೀರದ ವಕುರಾ ನಿವಾಸಿ ಅಬ್ದುಲ್ ಲತೀಫ್ ಗಾನೆ(29) ಅಲಿಯಾಸ್ ಉಮರ್ ಅಲಿಯಾಸ್ ದಿಲ್’ವಾರ್ ಹಾಗೂ ಬಟಪೊರಾ ನಿವಾಸಿ ಹಿಲಾಲ್ ಅಹ್ಮದ್ ಬಟ್(26) ಎಂದು ಗುರುತಿಸಲಾಗಿದೆ.
ವರದಿಗಳ ಅನ್ವಯ ದಿಲ್’ವಾರ್ ರಾಜ್’ಘಾಟ್ ಬಳಿ ಆಗಮಿಸಿದ್ದು, ಇಲ್ಲಿ ಸಂಚರಿಸುತ್ತಿದ್ದ ಮತ್ತೊಬ್ಬ ಉಗ್ರನನ್ನು ಭೇಟಿಯಾಗಲಿದ್ದ ಎನ್ನಲಾಗಿದೆ. ಈತನಿಂದ ಎ.32 ಬೋರ್ ಪಿಸ್ತೂಲ್ ಹಾಗೂ 26 ಜೀವಂತ ಕಾಟ್ರೇಜ್’ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಜೆಇಎಂ ಕಮಾಂಡರ್’ನ ರಬ್ಬರ್ ಸ್ಟಾಂಪ್ ಸೇರಿದಂತೆ ಮಹತ್ವದ ವಸ್ತುಗಳನ್ನು ಸೀಜ್ ಮಾಡಲಾಗಿದೆ.
Discussion about this post