ಬೆಂಗಳೂರು: ಇಂದು ಅನೇಕರು ಮನೋರಂಜನೆಗಾಗಿ ಸಂಗೀತ ಕಲಿಯಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ. ಅಂತವರಿಗಾಗಿಯೇ ಬೆಂಗಳೂರಿನ ಟೆಕಿಗಳು `ರಿಯಾಜ್’ ಆ್ಯಪ್ ನನ್ನು ಅಭಿವೃದ್ಧಿಪಡಿಸಿದ್ದು, ಎಲ್ಲಿ ಬೇಕಾದರು ತಮ್ಮ ಮೊಬೈಲ್ ಮೂಲಕವೇ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯಬಹುದಾಗಿದೆ.
ರಿಯಾಜ್ ಆ್ಯಪ್ ನನ್ನು ಬೆಂಗಳೂರಿನ ಟೆಕಿಗಳಾದ ಡಾ. ಗೋಪಾಲಕೃಷ್ಣ ಕೊಡುರಿ ಮತ್ತು ಪ್ರೊ. ಕ್ಸೇವಿಯರ್ ಸೆರ್ರಾ ಅವರು ಅಭಿವೃದ್ಧಿ ಪಡಿಸಿದ್ದಾರೆ.
ಸಂಗೀತ ಕಲಿಯಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಪ್ಲಿಕೇಶನ್’ಗಳು ಲಭ್ಯವಿದ್ದು ಅದರಲ್ಲಿ ರಿಯಾಜ್ ಆ್ಯಪ್ ಹವ್ಯಾಸಿ ಹಾಡುಗಾರರಿಗೆ ವರವಾಗಿ ಪರಿಣಮಿಸಿದೆ. ಈ ಆ್ಯಪ್ ನಿಂದಾಗಿ ಇಂದು ಸಂಗೀತ ಗುರುಗಳ ಬಳಿ ಹೋಗಿ ಸಂಗೀತವನ್ನು ಕಲಿಯುವ ಅವಶ್ಯಕತೆ ಇರುವುದಿಲ್ಲ.
ರಿಯಾಜ್ ಆ್ಯಪ್ ನಲ್ಲಿ ರಾಗಕ್ಕೆ ತಕ್ಕಂತೆ ಹಾಡುಗಳನ್ನು ಹಾಡುಬಹುದು. ಅಷ್ಟಲ್ಲದೆ ತಾವು ಹಾಡುವ ರಾಗ, ತಾಳಗಳಲ್ಲಿ ಯಾವುದೇ ತಪ್ಪುಗಳು ಕಂಡುಬಂದರೆ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬಹುದು. ಇದರಿಂದಾಗಿ ರಿಯಾಜ್ ಆ್ಯಪ್ ಸಂಗೀತ ಕಲಿಯುವವರ ಗುರುವಾಗಿದೆ.
ಸದ್ಯ ಐದು ಲಕ್ಷಕ್ಕಿಂತ ಹೆಚ್ಚು ಸಂಗೀತಾಸಕ್ತರು ರಿಯಾಜ್ ಆ್ಯಪ್ ಮೂಲಕ ಸಂಗೀತವನ್ನು ಕಲಿಯುತ್ತಿದ್ದಾರೆ. ಈ ಆ್ಯಪ್ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಸಂಗೀತಾಸಕ್ತರು ಸಂಗೀತ ಕಲಿಯಲು ಸಾಧ್ಯವಾಗುತ್ತಿದೆ. ಹಳ್ಳಿ ಹಕ್ಕಿಯಂತೆ ಹಾಡುತ್ತಿದ್ದವರು ಇಂದು ಶಾಸ್ತ್ರೀಯವಾಗಿ ಹಾಡುಗಳನ್ನು ಹಾಡುತ್ತಿದ್ದಾರೆ.
ಸಂಗೀತ ಕಲಿಕೆಯಲ್ಲಿ ಆಸಕ್ತಿ ಹೊಂದಿರುವವರು ರಿಯಾಜ್ ಆ್ಯಪ್ ನಲ್ಲಿ ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಸಂಗೀತ ಜೊತೆಗೆ ಖ್ಯಾತ ಬಾಲಿವುಡ್ ಗೀತೆಗಳನ್ನು ಕಲಿಯಬಹುದು. ವಿಶೇಷವೆನೆಂದರೆ ತಾವು ಹಾಡುವ ಹಾಡನ್ನು ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಬಹುದು.
ಆ್ಯಪ್ ಗಳಲ್ಲಿ ಹಾಡಿನ ಹಿನ್ನಲೆ ಸಂಗೀತ ಇದ್ದು ಅದಕ್ಕೆ ಸ್ವರ ನೀಡಬೇಕು. ಹೊಚ್ಚ ಹೊಸ ಹಾಡುಗಳ ಹಿನ್ನೆಲೆ ಸಂಗೀತವನ್ನು ಆ್ಯಪ್ ಗೆ ಅಪ್ ಲೋಡ್ ಮಾಡಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಆ್ಯಪ್ ಗಳಲ್ಲಿ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಹಾಡಲು ಹೆಚ್ಚು ಉತ್ಸುಕರಾಗಿದ್ದಾರೆ.
ರಿಯಾಜ್ ಆ್ಯಪ್ ನಲ್ಲಿ ನೂರಾರು ಟ್ಯೂನ್ ಗಳು ಲಭ್ಯವಿದ್ದು, ನುರಿತ ಸಂಗೀತ ಶಾಸ್ತ್ರಜ್ಞರ ಮಾರ್ಗದರ್ಶನದಲ್ಲಿ ಈ ಆ್ಯಪ್ ಸಿದ್ದಪಡಿಸಲಾಗಿದೆ. ಸಿನಿಮಾ ಗೀತೆಗಳಿಂದ ಹಿಡಿದು ಶಾಸ್ತ್ರೀಯ, ಹಿಂದೂಸ್ತಾನಿ, ವೆಸ್ಟ್ರನ್ ಜನಪ್ರಿಯ ಹಾಡುಗಳ ಟ್ಯೂನ್ ಗಳು ಲಭ್ಯವಿದೆ.
ಈ ಮೂಲಕ ಆ್ಯಪ್ ನಲ್ಲಿ ಮತ್ತೊಬ್ಬ ಹಾಡುಗಾರರನ್ನು ಸಂಗೀತಾಸಕ್ತರನ್ನು ಫಾಲೋ ಮಾಡುವ ಅವಕಾಶವಿದೆ. ಅವರೊಂದಿಗೆ ಚಾಟ್ ಕೂಡ ಮಾಡಬಹುದಾಗಿದ್ದು, ಅನೇಕ ಸಂಗೀತ ಪ್ರಿಯರನ್ನು ಒಂದು ಸೂರಿನಡಿ ಒಂದುಗೂಡಿಸುವ ಪ್ರಯತ್ನವೂ ಇಲ್ಲಿ ಸಾಗಿದೆ ಎಂಬುದು ವಿಶೇಷ.
ಪ್ಲೇ ಸ್ಟೋರ್ ಹಾಗೂ ಐಒಎಸ್’ನಲ್ಲಿ ಡೌನ್’ಲೋಡ್ ಮಾಡಿಕೊಳ್ಳಿ, ಗುರುವಿಲ್ಲದೇ ಸಂಗೀತ ಕಲಿಯಿರಿ…
Discussion about this post