ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ #Kuvempu University ರಾಷ್ಟ್ರೀಯ ಸೇವಾ ಯೋಜನೆಯು ಆಗಸ್ಟ್ 28 ರಿಂದ 31 ರವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರ್ ನಲ್ಲಿ ನಡೆಯುವ ರಾಷ್ಟ್ರೀಯ ಯುವ ನಾಯಕತ್ವ ಶಿಬಿರದಲ್ಲಿ ಭಾಗವಹಿಸುವ ಮೂಲಕ ಶಿಬಿರದಲ್ಲಿ ಸಹಭಾಗಿಯಾಗುವ ಅವಕಾಶ ಪಡೆದಿದೆ.
ಒರಿಸ್ಸಾ ಸರ್ಕಾರ, ಯುವ ಸಬಲೀಕರಣ ಇಲಾಖೆ ಭಾರತ ಸರಕಾರ ಹಾಗೂ ಪ್ರಾಜೆಕ್ಟ್ ಪಾಯಿಂಟ್ ಸಂಸ್ಥೆಯು ಜಂಟಿಯಾಗಿ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಒಟ್ಟು 18 ರಾಜ್ಯಗಳು 21 ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಿಂದ 17 ಸ್ವಯಂಸೇವಕರು ಆಯ್ಕೆಯಾಗಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ನ ಈ ವಿಸ್ತರಣಾ ಚಟುವಟಿಕೆಗಾಗಿ ಮಾನ್ಯ ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿ, ಕುಲಸಚಿವರಾದ ಶ್ರೀ ಎ. ಎಲ್.ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post