ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಜಗತ್ತಿನಲ್ಲಿ ಮೊಟ್ಟ ಮೊದಲು ಶೋಷಣೆಗಳ ವಿರುದ್ಧ ಪ್ರತಿಭಟಿಸಿದ ಮಹಾನ್ ಚೇತನ ಗೌತಮಬುದ್ಧ. ಅಂದು ಅಸ್ತಿತ್ವದಲ್ಲಿದ್ದ ಕಂದಾಚಾರಕ್ಕೆ ಪ್ರತ್ಯುತ್ತರವಾಗಿ ವೈಜ್ಞಾನಿಕ ತಳಹದಿಯ ಮೇಲೆ ಆಧ್ಯಾತ್ಮವನ್ನು ಪ್ರತಿಪಾದಿಸಿದವನು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಇಂದು ಕುವೆಂಪು ವಿಶ್ವವಿದ್ಯಾಲಯದ Kuvempu University ಆವರಣದಲ್ಲಿ ಏರ್ಪಡಿಸಿದ್ದ ಭಗವಾನ್ ಬುದ್ಧನ 2567ನೇ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಬೌದ್ಧ ಧರ್ಮದವರಿಗೆ ಮಾತ್ರ ಗೌತಮ ಬುದ್ಧ ಸೀಮಿತವಾಗಬಾರದು. ಸಾಮಾಜಿಕ ಅಸಮಾನತೆ, ಅನ್ಯಾಯ, ಶೋಷಣೆ, ವಂಚನೆಗಳನ್ನು ಕಂಡು ಬೇಸತ್ತ ಸಿದ್ಧಾರ್ಥ, ಲೋಕದ ಸಂಕಟಗಳಿಗೆ ನೀಡಿದ ಪರಿಹಾರ ನಮಗೆ ಮಾದರಿಯಾಗಬೇಕು ಎಂದರು.
Also read: ಶಾಸಕ ಕುಮಾರ್ ಬಂಗಾರಪ್ಪ ಪರ ಪುತ್ರಿ ಲಾವಣ್ಯ ಭರ್ಜರಿ ಪ್ರಚಾರ
ಕುಲಸಚಿವೆ ಪ್ರೊ.ಸಿ.ಗೀತಾ ಮಾತನಾಡಿ, ಬುದ್ಧನನ್ನು ಅರಿವುದೆಂದರೆ ಆನಂದವನ್ನು ಸಂಪಾದಿಸಿದಂತೆ, ದುಃಖ ದುಮ್ಮಾನಗಳನ್ನು ಕಳೆದುಕೊಂಡಂತೆ. ಗೌತಮ ಬುದ್ಧ ಕಟ್ಟಬಯಸಿದ ಸಮಾಜದೊಳಗೆ ಅನೀತಿಯಲ್ಲ. ಅಜ್ಞಾನವಿಲ್ಲ. ಅದಕ್ಷತೆಯಿಲ್ಲ. ಅನ್ಯಾಯವಿಲ್ಲ ಎಂದರು.
ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎನ್.ನವೀನ್ ಕುಮಾರ್, ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನದ ಕೇಂದ್ರ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ.ವೈ.ಎಲ್.ರಾಮಚಂದ್ರ, ದೂರಶಿಕ್ಷಣ ನಿರ್ದೇಶಕ ಪ್ರೊ.ಎಚ್.ಎನ್.ರಮೇಶ್ ಬಾಬು, ಪ್ರೊ.ಉದ್ದಗಟ್ಟಿ ವೆಂಕಟೇಶ್, ಡಾ.ಹಾ.ಮ.ನಾಗಾರ್ಜುನ್, ಡಾ. ಆರ್. ವಾಲ್ಮೀಕಿ, ನಾಗರಾಜ್ ಹಾಗೂ ಅಧ್ಯಾಪಕರು, ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post