ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಡಾ. ಬಾಬು ಜಗಜೀವನ್‌ರಾಮ್ ಓರ್ವ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಆಧುನಿಕ ಭಾರತ ನಿರ್ಮಾಣದ ಕರ್ತೃ ಎಂದು ಕುವೆಂಪು ವಿವಿಯ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಡಾ. ಬಾಬುಜಗಜೀವನ್‌ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶುಕ್ರವಾರ ಡಾ. ಬಾಬುಜಗಜೀವನ್‌ರಾಮ್ ಅವರ 117ನೇ ಜನ್ಮದಿನಾಚರಣೆಯನ್ನು ಅಧ್ಯಯನ ಕೇಂದ್ರದ ಕಚೇರಿಯಲ್ಲಿ ಸರಳವಾಗಿ ಆಯೋಜಿಸಲಾಗಿತ್ತು. ಹುತಾತ್ಮರಿಗೆ ಪುಷ್ಟನಮನ ಸಲ್ಲಿಸಿ ಮಾತನಾಡಿದ ಕುಲಸಚಿವರು, ಡಾ. ಬಾಬುಜಿ ಭಾರತದ ಸ್ವಾತಂತ್ರ ಹೋರಾಟದಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ್ದಲ್ಲದೇ, ಸ್ವಾತಂತ್ರ ಭಾರತದಲ್ಲಿ ಹಲವು ಸಚಿವಾಲಯಗಳ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿ ಯಶಸ್ಸು ಗಳಿಸಿದವರು ಎಂದರು.

ಈ ಸಂದರ್ಭದಲ್ಲಿ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ಸತ್ಯಪ್ರಕಾಶ್ ಎಂ ಆರ್, ಸಮಾಜವಿಜ್ಞಾನ ನಿಖಾಯದ ಡೀನ್ ಪ್ರೊ ಗುರುಲಿಂಗಯ್ಯ ಎಂ, ಮಾನವ ಸಂಪನ್ಮೂಲ ವಿಭಾಗದ ಡಾ. ಮಂಜುನಾಥ್ ಕೆ ಆರ್, ಡಾ. ನಲ್ಲಿಕಟ್ಟೆ ಸಿದ್ಧೇಶ್ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post