No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Tuesday, September 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕುವೆಂಪು ವಿವಿಯಲ್ಲಿ ಈಸೂರ ಕೊಡೆವು ನಾಟಕ ಪ್ರದರ್ಶನ

ಶಿವಮೊಗ್ಗ ರಂಗಾಯಣ ವತಿಯಿಂದ ಅಮೃತ ಭಾರತಿಗೆ ಕನ್ನಡದಾರತಿ | ಸಮರ ಜೀವಿಗಳ ಸೊಲ್ಲು, ಅಮರ ಜೀವಿಗಳ ಗಲ್ಲು

kalpa News by kalpa News
September 2, 2022
in ಶಿವಮೊಗ್ಗ
0
ಕುವೆಂಪು ವಿವಿಯಲ್ಲಿ ಈಸೂರ ಕೊಡೆವು ನಾಟಕ ಪ್ರದರ್ಶನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  |

ಭಾವುಟಗಳನ್ನು ಹಿಡಿದು ಏರುದನಿಯಲ್ಲಿ ‘ವಂದೇ ಮಾತರಂ’, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’, ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತ ಇದ್ದಕ್ಕಿದ್ದಂತೆ ಸಭಾಭವನದ ಏಳೂ ದ್ವಾರಗಳಿಂದ ಒಳಪ್ರವೇಶಿಸಿದ ಸ್ವಾತಂತ್ರ ಹೋರಾಟಗಾರ ನಾಟಕಧಾರಿಗಳು ಒಂದು ಕ್ಷಣ ಪ್ರೇಕ್ಷಕವಲಯವನ್ನು ಸ್ವಾತಂತ್ರ ಸಂಗ್ರಾಮದಲ್ಲಿ ಮುಳುಗೇಳಿಸಿತು ಹಾಗೂ ಮುಂದಿನ ೪೫ ನಿಮಿಷಗಳ ಸ್ವಾತಂತ್ರ ಹೋರಾಟದ ಕಿಚ್ಚನ್ನು ಮೈಮನಗಳಿಗೇರಿಸಿದ ಅಪೂರ್ವ ಕ್ಷಣಗಳು ಕುವೆಂಪು ವಿವಿಯಲ್ಲಿ ಇಂದು ನಡೆಯಿತು.

ಭಾರತದ ಸ್ವಾತಂತ್ರೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ಒದಗಿಬಂದಿರುವುದರ ಸವಿನೆನಪಿಗಾಗಿ ಕರ್ನಾಟಕ ಸರ್ಕಾರವು ಸ್ವಾತಂತ್ರ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಸುತ್ತಿದೆ. ಅದರ ಭಾಗವಾಗಿ ದೇಶದಲ್ಲಿಯೇ ಮೊದಲ ಸ್ವಾತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಹೆಸರುವಾಸಿಯಾಗಿದ್ದ ಶಿಕಾರಿಪುರದ ಈಸೂರು ಗ್ರಾಮದ ಸ್ವಾತಂತ್ರ ಹೋರಾಟ ನೆನೆಯುವ ಸಾಸ್ವೆಹಳ್ಳಿ ಸತೀಶ್ ರಚಿಸಿರುವ ಶ್ರೀಪಾದ್ ತೀರ್ಥಹಳ್ಳಿ ನಿರ್ದೇಶನದ ‘ಈಸೂರ ಕೊಡೆವು’ ನಾಟಕವನ್ನು ಶಿವಮೊಗ್ಗ ರಂಗಾಯಣ ವತಿಯಿಂದ ವಿವಿಯ ಬಸವ ಸಭಾ ಭವನದಲ್ಲಿ ಶುಕ್ರವಾರ ಪ್ರದರ್ಶಿಸಲಾಯಿತು.
ಪ್ರತಿದಿನ ಪಾಠ-ಪ್ರವಚನ, ಪ್ರಯೋಗಾಲಯದ ಶೈಕ್ಷಣಿಕ ಚಟುವಟಿಕೆಗೆಳಲ್ಲಿ ತಲ್ಲೀನರಾಗಿರುತ್ತಿದ್ದ ವಿವಿಯ ವಿದ್ಯಾರ್ಥಿಗಳು ಇಂದು ಸ್ವಾತಂತ್ರ ಹೋರಾಟದ ನಾಟಕ ವೀಕ್ಷಿಸಿ ಸ್ವಾತಂತ್ರ ಘೋಷಣೆಗಳನ್ನು ಮೊಳಗಿಸುತ್ತಿದ್ದಿದುದು ಕಂಡುಬಂದಿತು. ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಸ್ವಾತಂತ್ರ ಹೋರಾಟದ ಚರಿತ್ರಾರ್ಹ ಘಟನೆಗಳಲ್ಲಿ ಈಸೂರಿನ ಹೋರಾಟವು ಒಂದು. ಇಂದಿನ ಯುವ ಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್‌ರ ಹೋರಾಟಗಳು, ಕೊಡುಗೆಗಳೇನು ಎಂದು ಅರ್ಥಮಾಡಿಸುವ ಜೊತೆಗೆ ಸ್ವಾತಂತ್ರ ಸಂಗ್ರಾಮದಲ್ಲಿ ಮಡಿದ ಅನೇಕ ಅನಾಮಧೇಯ ಹುತಾತ್ಮರನ್ನು ಪರಿಚಯಿಸಬೇಕಿದೆ. ವಿದ್ಯಾರ್ಥಿಗಳು ಸ್ವಾತಂತ್ರದ ಮೌಲ್ಯವನ್ನು ಅರಿಯಲು ಹಾಗೂ ದೇಶಾಭಿಮಾನ ಮೂಡಿಸಿಕೊಳ್ಳಲು ಈಸೂರ ಕೊಡೆವು ನಂತಹ ಈ ನೆಲದ ಸತ್ಯ ಘಟನೆಗಳ ಕುರಿತ ನಾಟಕಗಳು ಬಹುಸಹಕಾರಿ ಎಂದು ತಿಳಿಸಿದರು.
ಶಿವಮೊಗ್ಗ ರಂಗಾಯಣದ ಮುಖ್ಯಸ್ಥ ಸಂದೇಶ್ ಜವಳಿ ಮಾತನಾಡಿ, ಶಿವಮೊಗ್ಗ ರಂಗಾಯಣ ವತಿಯಿಂದ ಎರಡು ತಂಡಗಳನ್ನು ರಚಿಸಿ ಈಸೂರ ಕೊಡೆವು ನಾಟಕವನ್ನು ಕರ್ನಾಟಕದಾದ್ಯಂತ ೧೦೦ಕ್ಕೂ ಹೆಚ್ಚು ಕಡೆ ಪ್ರದರ್ಶನ ಮಾಡಲಾಗುತ್ತಿದೆ. ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಕೊಡುಗೆಯು ಕಡಿಮೆಯೇನೆಲ್ಲ ಎಂಬುದನ್ನು ನಮ್ಮ ಜನರು ಅರಿಯಬೇಕು. ಚಳುವಳಿಯಲ್ಲಿ ಕರ್ನಾಟಕದ ಕೊಡುಗೆಗಳನ್ನು, ಸ್ವಾತಂತ್ರ ಸೇನಾನಿಗಳ ತ್ಯಾಗ, ವೀರಗಾಥೆಗಳನ್ನು ಅರಿತು ತಾಯ್ನಾಡಿನ ಮೇಲಿನ ಪ್ರೀತಿಯನ್ನು, ಅಭಿಮಾನವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

Also read: ಊಟ ಮುಗಿಸಿಕೊಂಡು ಬರುವಾಗ ಅಪಘಾತ: ಒಬ್ಬ ಸಾವು, ಉಳಿದವರಿಗೆ ಗಾಯ!

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಸ್ಥರು ಗಾಂಧೀಜಿಯವರ ಘೋಷಣೆಯಂತೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅದರ ಭಾಗವಾಗಿ ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಭರಿಸಲು ನಿರಾಕರಿಸಿ, ಶಾನುಭೋಗ ಮತ್ತು ಪಟೇಲರಿಂದ ಕೈಯಿಂದ ಕಂದಾಯ ಪುಸ್ತಕವನ್ನು ಕಿತ್ತುಕೊಂಡು ಕಳಿಸುವ ಮೂಲಕ ಆರಂಭವಾಗುವ ಸಂಘರ್ಷವು ಬ್ರಿಟಿಷ್ ಸರ್ಕಾರದ ಸೇನೆಯೊಡಗಿನ ಹೋರಾಟ, ಅದರ ದಬ್ಬಾಳಿಕೆ, ಅನ್ಯಾಯಗಳನ್ನು ಅನುಭವಿಸಿ ಕಡೆಗೆ ಸ್ವಾತಂತ್ರವೇ ಮುಖ್ಯ ಎಂದು ಗಲ್ಲಿಗೇರುವವರೆಗಿನ ಕಥಾನಕವನ್ನು ತೀರ್ಥಹಳ್ಳಿಯ ಪ್ರಥಮ ದರ್ಜೆ ಕಾಲೇಜು ಹಾಗೂ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಮೈನವಿರೇಳಿಸುವಂತೆ ಅಭಿನಯಿಸಿದರು.
ಈಸೂರಿನ ಐವರು ವೀರರು ಗಲ್ಲಿಗೇರಿದ ನಂತರ ಮೊಳಗಿದ ವಂದೇಮಾತರಂ ಗೀತೆಗೆ ಸಭಿಕರು ಎದ್ದುನಿಂತು ಗೌರವಿಸುವಾಗ ಕಣ್ಣಾಲಿಗಳು ತೇವಗೊಂಡದ್ದು ಕಂಡುಬಂದಿತು. ಇನ್‌ಸ್ಪೆಕ್ಟರ್ ಕೆಂಚೇಗೌಡ, ಲಂಗೋಜಿರಾವ್ ಹಾಗೂ ಗ್ರಾಮಸ್ಥರ ಪ್ರಾತ್ರಗಳಲ್ಲಿ ವಿದ್ಯಾರ್ಥಿಗಳು ಪರಕಾಯ ಪ್ರವೇಶ ಮಾಡಿದಂತೆ, ಸ್ವಾತಂತ್ರ ಹೋರಾಟದ ಸ್ಫೂರ್ತಿ ಮನತುಂಬಿ ಬಂದಿತೆಂದು ಸಭಿಕರು ಕಡೆಗೆ ಅಭಿಪ್ರಾಯ ವ್ಯಕ್ತಪಡಿಸಿದರು. ನಾಟಕ ವೀಕ್ಷಿಸಲು ವಿವಿಯ ಕುಲಸಚಿವೆ ಅನುರಾಧ ಜಿ, ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ನಾಟಕ ವೀಕ್ಷಿಸಿ ದೇಶಾಭಿಮಾನದ ಕಿಚ್ಚಿನಲ್ಲಿ ಮಿಂದೆದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShankaraghattaShimogaShivamoggaShivamogga Newsಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share206Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಊಟ ಮುಗಿಸಿಕೊಂಡು ಬರುವಾಗ ಅಪಘಾತ: ಒಬ್ಬ ಸಾವು, ಉಳಿದವರಿಗೆ ಗಾಯ!

Next Post

ಸೆ.5-9 ಕ್ಷೇಮೇಂದ್ರ ವಿರಚಿತ ಶ್ರೀ ರಾಮಾಯಣ ಕಥಾಮಂಜರಿ ಉಪನ್ಯಾಸ ಮಾಲೆ

kalpa News

kalpa News

Next Post
ಸೆ.5-9 ಕ್ಷೇಮೇಂದ್ರ ವಿರಚಿತ ಶ್ರೀ ರಾಮಾಯಣ ಕಥಾಮಂಜರಿ ಉಪನ್ಯಾಸ ಮಾಲೆ

ಸೆ.5-9 ಕ್ಷೇಮೇಂದ್ರ ವಿರಚಿತ ಶ್ರೀ ರಾಮಾಯಣ ಕಥಾಮಂಜರಿ ಉಪನ್ಯಾಸ ಮಾಲೆ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL