ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕ ಡಾ.ಜಿ. ಪ್ರಶಾಂತ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಟಿ.ಎಂ. ಮಹೇಂದ್ರ “ರಾಮಚಂದ್ರ ಚರಿತ ಪುರಾಣ ಮತ್ತು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಗಳು: ತೌಲನಿಕ ಅಧ್ಯಯನ” ಎಂಬ ವಿಷಯ ಕುರಿತು ಸಂಶೋಧನಾ ಅಧ್ಯಯನ ಕೈಗೊಂಡು, ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ.
ಟಿ.ಎಂ. ಮಹೇಂದ್ರ ಅವರು, ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು, ಹೂಡೇಂ ಗ್ರಾಮದ ನಿವಾಸಿಗಳಾದ ಟಿ. ಮಲ್ಲಿಕಾರ್ಜುನ ಮತ್ತು ಶಿವಗಂಗಮ್ಮ ಇವರ ಪುತ್ರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post