ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದಲ್ಲಿ #Kuvempu University ಮಂಗಳವಾರ 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಆಯವ್ಯಯವನ್ನು ಮಂಡಿಸಲಾಯಿತು. ಇಂದು ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್ ಬಜೆಟ್ #Budget ಮಂಡಿಸಿದರು.
2025-26ನೇ ಸಾಲಿಗೆ ಒಟ್ಟಾರೆ, ಸ್ವೀಕೃತಿಗಳಿಂದ 13384.81 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ವೆಚ್ಚಗಳಿಗಾಗಿ 17110.93 ಲಕ್ಷಗಳನ್ನು ನಿಗದಿಗೊಳಿಸಿದ್ದು, 3726.12 ಲಕ್ಷಗಳ ಕೊರತೆಯಿದೆ ಎಂದರು.
13384.81 ಲಕ್ಷಗಳ ಸ್ವೀಕೃತಿ ನಿರೀಕ್ಷಣೆಯಲ್ಲಿ ವೇತನ ಮತ್ತು ಭತ್ಯೆಗಳು /ಪಿಪಿಂಚಣಿ/ ನೂತನ ಪಿಂಚಣಿ ಯೋಜನೆ ವಂತಿಕೆ(Pay & Allowances) ಗೆ 11061.71 ಲಕ್ಷ ರೂ. ಗಳು, ಶೈಕ್ಷಣಿಕ ವೆಚ್ಚಗಳಿಗೆ 1784.30 ಲಕ್ಷ ರೂ. ಗಳು, ಆಡಳಿತಾತ್ಮಕ ವೆಚ್ಚಗಳಿಗೆ 1550.83 ಲಕ್ಷ ರೂ. ಗಳು, ವಿದ್ಯಾರ್ಥಿ ಬೆಂಬಲ ಸೇವೆಗಳಿಗೆ 490.31 ಲಕ್ಷ ರೂ. ಗಳು, ಪರೀಕ್ಷಾ ವೆಚ್ಚಗಳಿಗೆ 1700.00 ರೂ. ಗಳು, ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚಗಳಿಗೆ 100.00 ಲಕ್ಷ ರೂ. ಗಳು, ಅಭಿವೃದ್ಧಿ ಕಾಮಗಾರಿಗಳಿಗೆ 100.00 ಲಕ್ಷ ರೂ. ಗಳು ಮತ್ತು ಸಾಮಾನ್ಯ ಅಭಿವೃದ್ಧಿ ವೆಚ್ಚಗಳಿಗೆ 323.78 ಲಕ್ಷ ರೂ. ಗಳನ್ನು ನಿಗದಿಗೊಳಿಸಲಾಗಿದ್ದು, ಒಟ್ಟು 17110.93 ಲಕ್ಷ ರೂ. ಗಳನ್ನು ವ್ಯಯಿಸಲು ಉದ್ದೇಶಿಸಲಾಗಿದೆ ಎಂದರು.
Also read: AKBMS Elections: Bhanuprakash Sharma files nomination for the post of President
ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ರೆಗ್ಯುಲರ್ ಮತ್ತು ದೂರ ಶಿಕ್ಷಣದ ಪ್ರವೇಶದಿಂದ ಆದಾಯದ ಕೊರತೆಯ ನಡುವೆಯೂ, ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯವನ್ನು ಯಥಾವತ್ತಾಗಿ ಮುಂದುವರೆಸಲು ಈ ಆಯ-ವ್ಯಯದಲ್ಲಿ ಪ್ರಯತ್ನಿಸಲಾಗಿದೆ. ಆಡಳಿತಾತ್ಮಕ ವೆಚ್ಚಗಳನ್ನು ಆದಾಯದೊಂದಿಗೆ ಸರಿದೂಗಿಸಲು ವಿಶ್ವವಿದ್ಯಾಲಯಕ್ಕೆ ಸವಾಲಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನದ ಬಿಡುಗಡೆ, ಆಡಳಿತಾತ್ಮಕ ವೆಚ್ಚಗಳ ಕಡಿತ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿ, ಕಾರ್ಯಭಾರ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಕಡಿತ ಮಾಡುವುದು. ಪರಿನಿಯಮಗಳಿಗೆ ಸರ್ಕಾರದ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ.
2025-26ನೇ ಸಾಲಿನಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳದೆ, ಮುಂದುವರೆದ ಕಾಮಾಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅನುದಾನ ಕೋರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ವಿವಿಧ ನಿಕಾಯಗಳ ಡೀನರು, ವಿದ್ಯಾಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post