ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ Kuvempu University ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಮಾಸಿಕ ಸಂಭಾವನೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.
Also read: ಸಹ್ಯಾದ್ರಿ ಕಾಲೇಜು ವಾಟ್ಸಪ್ ಗ್ರೂಪಲ್ಲಿ ಪಾಕ್ ಧ್ವಜ ಬಿತ್ತರಿಸಿದ ವಿದ್ಯಾರ್ಥಿಗಳ ವಿರುದ್ಧ ದೂರು
ಸಿಂಡಿಕೇಟ್ ಸದಸ್ಯ ಬಿ. ನಿರಂಜನಮೂರ್ತಿ, ಎಚ್.ಬಿ. ರಮೇಶ್ ಬಾಬು, ಬಳ್ಳೇಕೆರೆ ಸಂತೋಷ್, ಕಿರಣ್ ರವೀಂದ್ರ ದೇಸಾಯಿ, ಎಚ್. ರಾಮಲಿಂಗಪ್ಪ ಹಾಗೂ ಎಸ್ ಆರ್. ನಾಗರಾಜ್ ಇವರ ಒತ್ತಾಯದ ಮೇರೆಗೆ ಕೆಲವೊಂದು ತಿದ್ದುಪಡಿಗಳೊಂದಿಗೆ ವರದಿಯನ್ನು ಅಂಗೀಕರಿಸಲಾಗಿದೆ. ಅದರಂತೆ ಈ ಕೆಳಕಂಡಂತೆ ಎಂಟು ವಿವಿಧ ಹಂತಗಳಲ್ಲಿ ಸಂಭಾವನೆ/ವೇತನವನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು. ಸದರಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕೆಲವೊಂದು ಸೌಲಭ್ಯಗಳನ್ನು ವಿಸ್ತರಿಸಲು ನಿರ್ಣಯಿಸಲಾಗಿದೆ.
ಪರಷ್ಕೃತ ವರದಿಯಲ್ಲಿರುವ ತಿದ್ದುಪಡಿಗಳೇನು
- 15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 45,000
- 15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 40000
- 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 38000
- 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 36000
- 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 35000
- 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 33000
- 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 31000
- 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 30000
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post