ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ Kuvempu University ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸುಮಾರು 10 ಮೆರಿಟ್ ಸೀಟುಗಳು ಲಭ್ಯವಿದ್ದು, ಡಿ.5ರೊಳಗೆ ನೇರ ಪ್ರವೇಶಾತಿ ಪಡೆಯಲು ಅವಕಾಶ ನೀಡಲಾಗಿದೆ.
ಕುವೆಂಪು ವಿವಿಯ ಎಲ್ಲ ಸ್ನಾತಕೋತ್ತರ ಘಟಕಗಳು, ಕೇಂದ್ರಗಳು ಮತ್ತು ವಿಭಾಗಗಳಿಗೆ ನ. 27ರಿಂದ 29ರವರೆಗೆ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಈಗಾಗಲೇ ಪ್ರವೇಶಾತಿ ನಡೆದಿದ್ದು, ಕೆಲವೇ ಮೆರಿಟ್ ಸೀಟುಗಳು ಬಾಕಿ ಉಳಿದಿವೆ. ಇವುಗಳನ್ನು ಆಸಕ್ತ ಅರ್ಹರಿಗೆ ಒದಗಿಸಲು ವಿವಿ ಕ್ರಮ ಕೈಗೊಂಡಿದೆ.
ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ (ಎಂ.ಎ.) ಪಡೆಯಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಡಿ.5ರವರೆಗೆ ಮೊದಲು ಬಂದವರಿಗೆ ಮೊದಲ ಪ್ರವೇಶಾತಿ ಆದ್ಯತೆ ಮೇಲೆ ಅಡ್ಮಿಷನ್ ನೀಡಲು ನಿರ್ಧರಿಸಲಾಗಿದೆ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸ್ನಾತಕ ಪದವಿ (ಡಿಗ್ರಿ)ಯಲ್ಲಿ ಯಾವುದೇ ಪದವಿ ಅಂದರೆ ಯಾವುದೇ ವಿಷಯದಲ್ಲಿ ಬಿಎ, ಬಿಎಸ್ಸಿ ಅಥವಾ ಬಿಕಾಂ, ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಉಳಿಕೆ ಮೆರಿಟ್ ಸೀಟುಗಳ ಭರ್ತಿಗೆ ವಿಶೇಷ ಅವಕಾಶ ನೀಡಲಾಗಿದ್ದು, ಆದ್ಯತೆ ಅನುಗುಣವಾಗಿ ಪ್ರವೇಶಾತಿ ನೀಡಲಾಗುವುದು. ಪ್ರವೇಶಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಭಾಗದ ಅಧ್ಯಕ್ಷರನ್ನು ಅಥವಾ ಮೊ. 9886836660, 9141215169 ಸಂಪರ್ಕಿಸಬಹುದು.
Also read: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ. 21 ಹೆಚ್ಚಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post