ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಭಾರತ ಇಂದು ಸ್ವಾಯತ್ತ ಉದ್ಯಮಶೀಲ ಕೌಶಲ್ಯ ಭಾರತವಾಗಿ ರೂಪುಗೋಳ್ಳುತ್ತಿದ್ದು, ಯುವಕರಿಗೆ ಹಲವಾರು ಅವಕಾಶಗಳನ್ನು ಓದಗಿಸುತ್ತಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿರುವ ಶ್ರೀನಿವಾಸ ಎಸ್.ಕೆ. ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಪ್ರಥಮ ವರ್ಷದ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಸೋಮವಾರ ವಿಭಾಗದಲ್ಲಿ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಯಾವುದೇ ವೈಜ್ಞಾನಿಕ/ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳಾದರು, ಅಥವಾ ಅಂತರ್ಜಾಲದಲ್ಲಿ ಜ್ಞಾನ ಪಸರಿಸಿದರು ಸಹ ಮನುಷ್ಯ ತನ್ನ ವಿವೇಚನಾಶಕ್ತಿಯಿಂದ ರೂಪಿಸುವ ಅವಕಾಶಗಳು ಮಾತ್ರ ನಿಜವಾದ ಬೆಳವಣಿಗೆ ತಂದುಕೊಡುತ್ತದೆ. ಅದಕ್ಕೆ ನಿರ್ವಹಣಾಶಾಸ್ರ್ತದ ಜ್ಞಾನ ಅತಿಮುಖ್ಯವೆಂದು ತಿಳಿಸಿದರು.

ಸಹಪ್ರಾಧ್ಯಾಪಕ ಹಾಗೂ ಪರೀಕ್ಷಾಂಗ ಉಪಕುಲಸಚಿವ ಡಾ. ಕೆ ಆರ್ ಮಂಜುನಾಥ್ ಮಾತನಾಡಿ, ಕೌಶಲ್ಯ, ಉತ್ತಮ ಮನೋಭಾವ ಹಾಗು ಸೃಜನಶೀಲತೆಯನ್ನು ಬೆಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದ ಉದ್ದೇಶಗಳನ್ನು ಸಕಾರಾತ್ಮಕವಾಗಿ ಪೂರೈಸಿಕೊಳ್ಳಬಹುದೆಂದು ತಿಳಿಸಿದರು. ಪ್ರೊ. ಹೆಚ್ ಎನ್ ರಮೇಶ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನಲಿರುವ ಅಭೂತಪೂರ್ವ ಶಕ್ತಿ ಸಾಮಥ್ಯಗಳನ್ನು ಅರಿತುಕೊಂಡು ತಮ್ಮ ಹಾಗು ತಮ್ಮ ದೇಶದ ಏಳಿಗೆಗೆ ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಭಾಗದ ಎಲ್ಲಾ ಉಪನ್ಯಾಸಕರು, ಸಂಶೋಧನಾರ್ಥಿಗಳು ಹಾಜರಿದ್ದರು.












Discussion about this post