ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಅಸಮಾನತೆ, ಹಸಿವು, ಅವಮಾನಗಳಿಂದ ತಲ್ಲಣಿಸುತ್ತಿದ್ದ ಸಮಾಜಕ್ಕೆ ಸೌಹಾರ್ದತೆ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಗೌತಮ ಬುದ್ಧನ ತತ್ವ ಸಾರ್ವಕಾಲಿಕ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ #Kuvempu University ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಬುದ್ಧಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ವಿವಿಧ ಭಾಗಗಳಲ್ಲಿ ಗಡಿ ವಿಚಾರ, ಭಾಷೆ, ಸಂಸ್ಕೃತಿಯ ವಿಚಾರಗಳಲ್ಲಿ ದೇಶ ದೇಶಗಳ ನಡುವೆ ಬಗೆಹರಿಸಲಾಗದ ಬಿಕ್ಕಟ್ಟುಗಳಿವೆ. ಅವು ಉಲ್ಬಣಗೊಳ್ಳುತ್ತಲೇ ಇವೆ. ವರ್ತಮಾನ ಕಾಲದ ಇಂಥಹಾ ಹಲವು ಬಿಕ್ಕಟ್ಟುಗಳಿಗೆ ಬುದ್ಧತತ್ವದಲ್ಲಿ ಪರಿಹಾರವಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್ ಮಾತನಾಡಿ, ಜಗತ್ತಿಗೆ ಶಾಂತಿ, ಅಹಿಂಸೆಯ ತತ್ವವನ್ನು ಪ್ರತಿಪಾದಿಸಿದ ಬುದ್ಧ, ಜನತೆಯ ದುಃಖವನ್ನು ನಿವಾರಿಸಲು ದೇಶಾದ್ಯಂತ ಸಂಚರಿಸಿ ತನ್ನದೇ ಆದ ಪರಿಹಾರ ಹುಡುಕಿಕೊಂಡವನು. ಬುದ್ಧನ ತತ್ವವನ್ನು ಅಳವಡಿಸಿಕೊಂಡರೆ ಸಾರ್ಥಕ ಬದುಕು ನಮ್ಮದಾಗುವುದು ಎಂದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಕಲಾ ನಿಕಾಯದ ಡೀನ್ ಪ್ರೊ. ಗುರುಲಿಂಗಯ್ಯ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಪ್ರೊ. ನಾಗರಾಜ್, ಡಾ. ವಿಜಯಕುಮಾರ, ಡಾ. ಯೋಗೀಶ್ ನಾಯಕ್, ಡಾ. ಎನ್. ಬಿ. ತಿಪ್ಪೇಸ್ವಾಮಿ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಧರ್ಮೇಗೌಡ, ಡಾ. ಅಣ್ಣಯ್ಯ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























