ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸಹ್ಯಾದ್ರಿ ಕಾಲೇಜು Sahyadri College ವಾಟ್ಸಪ್ ಗ್ರೂಪಿನಲ್ಲಿ ಪಾಕಿಸ್ಥಾನದ ಧ್ವಜದ ಫೋಟೋ ಬಿತ್ತರಿಸಿದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕುವೆಂಪು ವಿವಿ Kuvempu University ಕುಲಸಚಿವೆ ಜಿ. ಅನುರಾಧ, ಸಹ್ಯಾದ್ರಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳ ಗ್ರೂಪಿನಲ್ಲಿ ಚರ್ಚೆ ನಡೆಯುವಾಗ ಭಾರತದ ಧ್ವಜಕ್ಕೆ ಪ್ರತಿಯಾಗಿ ಪಾಕ್ ಧ್ವಜವನ್ನು ಹಾಕಲಾಗಿತ್ತು. ಇದರ ವಿರುದ್ಧ ಎಬಿವಿಪಿ ಈಗಾಗಲೇ ಪ್ರತಿಭಟನೆ ನಡೆಸಿ, ಇದು ದೇಶದ್ರೋಹದ ಕೆಲಸವಾಗಿದ್ದು, ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.
Also read: ವಿಟಿಯು ಪರೀಕ್ಷೆಯಲ್ಲಿ ಜೆಎನ್‌ಎನ್‌ಸಿಇ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಈ ಹಿನ್ನೆಲೆಯಲ್ಲಿ ಸಿಇಎನ್ ಠಾಣೆಗೆ ದೂರು ನೀಡಲಾಗಿದ್ದು, ಕಾಲೇಜಿನಲ್ಲಿ ಸಮಿತಿ ರಚಿಸಿ, ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post