ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಆಧುನಿಕ ಜೀವನದಲ್ಲಿ ನಾವು ದೈನಂದಿನ ಜೀವನದಲ್ಲಿ ಪ್ರತಿ ಕಾರ್ಯಕ್ಕೂ ರಾಸಾಯನಿಕಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ನಮ್ಮ ಪೂರ್ವಜರು ರಾಸಾಯನಿಕಗಳನ್ನು ಬಳಸದೆ ಜೈವಿಕವಾಗಿ ಬದುಕಿ ತೋರಿಸಿದ್ದಾರೆ. ಈಗ ಅಂಥವರನ್ನು ವೈಜ್ಞಾನಿಕ ಚೌಕಟ್ಟಿನಲ್ಲಿಟ್ಟು ನೋಡುವ ಅಗತ್ಯ ಇದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಹೇಳಿದರು.
ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ #Kuvempu University ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಹಾಗೂ ಡಿಎಸ್‌ಟಿ-ಎಸ್‌ಇಆರ್‌ಬಿ ನವದೆಹಲಿ ಇವರ ಪ್ರಯೋಜಕತ್ವದಲ್ಲಿ ಮ್ಯೂಕೋರ್ಮೈಕೋಸಿಸ್ ಮೇಲೆ ಔಷಧೀಯ ಸಸ್ಯಗಳ ಮತ್ತು ಅವುಗಳ ಚಯಾಪಚಯ ಕ್ರಿಯೆಗಳ ಜೈವಿಕ ಶೋಧನೆ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೋವಿಡ್-19 #Covid-19 ನಂತರ ಮ್ಯೂಕೋರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್)ನಿಂದ ಬಾಧಿತರಾಗಿ ರಾಜ್ಯಾದ್ಯಂತ ಹಲವು ಜನರು ಸಾವನ್ನಪ್ಪಿದ್ದರು. ಇದನ್ನು ನಿಯಂತ್ರಿಸುವ ಮತ್ತು ಪರಿಹಾರ ಹುಡುಕುವ ಉದ್ದೇಶದಿಂದ ಪಶ್ಚಿಮ ಘಟ್ಟಗಳಲ್ಲಿರುವ ಔಷಧೀಯ ಸಸ್ಯಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಪ್ರೊ. ಬಿ. ತಿಪ್ಪೇಸ್ವಾಮಿ ಅವರು ಸಂಶೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
Also read: ಮರ ಬೆಳೆಸುವುದು ಭವಿಷ್ಯದ ಇಂಧನಕ್ಕೆ ಹೂಡಿಕೆ ಹೇಗೆ? ಡಾ. ಹೊನ್ನಪ್ಪ ತಿಳಿಸಿದ್ದಾರೆ ಓದಿ
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಶ್ರೀಧರ್ ಎಸ್ ಮಾತನಾಡಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ದೇಶ ವಿದೇಶಗಳಲ್ಲಿ ಬಹಳಷ್ಟು ಅವಕಾಶಗಳಿವೆ. ನಿರಂತರ ಪರಿಶ್ರಮ ಹಾಗೂ ಸಮರ್ಪಣಾ ಭಾವದ ಸಂಶೋಧನೆಯಿಂದ ಅವನ್ನು ಪಡೆದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಸಂಶೋಧನಾ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು.
ಕುವೆಂಪು ವಿವಿ ಹಣಕಾಸು ಅಧಿಕಾರಿ ಪ್ರೊ. ರಮೇಶ್, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ್, ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ. ಕೆ.ಎಸ್ ಗಿರೀಶ್, ಹಾಗೂ ಸೂಕ್ಷಾಣು ಜೀವಶಾಸ್ತ್ರವಿಭಾಗದ ಅಧ್ಯಕ್ಷ ಪ್ರೊ. ಬಿ ತಿಪ್ಪೆಸ್ವಾಮಿ, ಪ್ರೊ. ಎನ್.ಬಿ ತಿಪ್ಪೆಸ್ವಾಮಿ, ಪ್ರೊ. ಶ್ರೀಶೈಲಾ, ಡಾ. ಸತೀಶ ಜಿ. ಜೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post