ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ #Kuvempu University ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ನಮಿತಾ ಆರ್ ಶೆಟ್ಟಿಯವರು ಪಿಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು “ಡೆವಲಪ್‍ಮೆಂಟ್ ಆಫ್ ರಿವರ್ಸಿಬಲ್ ಡಾಟಾ ಹೈಡಿಂಗ್ ಟೆಕ್‍ನಿಕ್ಸ್ ಫಾರ್ ಡಿಜಿಟಲ್ ಇಮೇಜಸ್” ವಿಷಯದ ಕುರಿತು ಅಧ್ಯಯನ ನಡೆಸಿದ್ದರು. ಇವರು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ಯೋಗೀಶ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
Also read: ಮೌಲ್ಯಯುತ ಬದುಕು ರೂಪಿಸಿಕೊಂಡಿರುವ ರುದ್ರೇಗೌಡರು ಯುವಜನರಿಗೆ ಮಾದರಿ | ಗೋಪಿನಾಥ್
ಇವರು ಶಂಕರಘಟ್ಟದ ರೂಪ ರಮೇಶ್ ಶೆಟ್ಟಿ ದಂಪತಿಗಳ ಮಗಳಾಗಿದ್ದು, ಶಿವಮೊಗ್ಗದ ಕ್ಲಿಫ್ ಎಂಬೆಸ್ಸಿ ಮಾಲೀಕರಾದ ಆರ್. ರೋಹಿತ್‍ರವರ ಪತ್ನಿಯಾಗಿದ್ದಾರೆ.
ಇವರಿಗೆ ಇದೆ ತಿಂಗಳು 22 ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಪ್ರಮಾಣ ಪತ್ರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















