ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ(ಶಿವಮೊಗ್ಗ) |
ಮೈಸೂರು ಸಂಸ್ಥಾನವನ್ನು ಉತ್ತುಂಗಕ್ಕೆ ಕೊಂಡೊಯ್ದ ಅಂದಿನ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 104ನೆಯ ಜನ್ಮದಿನದ ಅಂಗವಾಗಿ ನೇತ್ರದಾನ ಮಹಾದಾನ ಎಂಬ ಶೀರ್ಷಿಕೆಯಡಿಯಲ್ಲಿ ಉಚಿತ ನೇತ್ರದಾನ ಪ್ರತಿಜ್ಞಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಕುವೆಂಪು ವಿವಿ Kuvempu VV ಎನ್’ಎಸ್’ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಈ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ ಧನ್ಯರು. ಸ್ವತಂತ್ರ ಪೂರ್ವದಲ್ಲಿಯೇ ಅವರಿಗಿರುವ ಶಿಕ್ಷಣದ ಬಗ್ಗೆ, ಪರಿಸರದ ಬಗ್ಗೆ ಮಹಿಳೆಯರ ಬಗ್ಗೆ, ಸಾಮಾಜಿಕ ಖಾಳಜಿ ಬಗ್ಗೆ ಇಂದಿನ ನಾವುಗಳು ಸರಿಯಾಗಿ ತಿಳಿಸಿಕೊಡಬೇಕಾಗಿದೆ. ಈ ಮೂಲಕ ಅವರ ಹಾದಿಯಲ್ಲಿ ನಡೆಯಬೇಕಾಗಿದೆ ಎಂದರು.
ಅಲ್ಲದೇ, ನೇತ್ರದಾನ ಮಹತ್ವ ಕುರಿತು ವಿವರಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು. ಶಂಕರ ಕಣ್ಣಿನ ಆಸ್ಪತ್ರೆಯ ಡಾ. ನಯನಾ ಮತ್ತು ಆರ್.ಎಸ್. ಪ್ರದೀಪ್ ಅವರುಗಳು ವಿದ್ಯಾರ್ಥಿಗಳಿಗೆ ನೇತ್ರದಾನದ ಪ್ರಾಮುಖ್ಯತೆ ತಿಳಿಸಿ ಮತ್ತು ನೇತ್ರದಾನದ ಕುರಿತು ವಿಧ್ಯಾರ್ಥಿಗಳಿಗಿದ್ದ ಗೊಂದಲಗಳಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿದರು.
Also read: ನೆಮ್ಮದಿ ಜೀವನಕ್ಕೆ ಭಾಗವತ ಗ್ರಂಥ ಸಹಹಾರಿ: ಅನಿರುದ್ಧಾಚಾರ್ಯ ಪಾಂಡುರಂಗಿ ಅಭಿಮತ
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ರಾಜೇಶ್ವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಸೇವಾ ಕಾರ್ಯಗಳಲ್ಲಿ ಕುವೆಂಪು ವಿವಿಯ ಎನ್’ಎಸ್’ಎಸ್ ತೊಡಗಿರುವುದು ಅಭಿನಂದನಾರ್ಹ ಎಂದು ಪ್ರಶಂಸಿಸಿದರು.
ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಸಹ್ಯಾದ್ರಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಹ್ಯಾದ್ರಿ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ಎಂ.ಕೆ. ವೀಣಾ, ಡಾ. ಕೆ.ಬಿ. ಧನಂಜಯ ಮತ್ತು ಎನ್’ಎಸ್’ಎಸ್ ಅಧಿಕಾರಿಗಳಾದ ಡಾ. ನಾಗಾರ್ಜುನ, ಡಾ. ಬಿ.ಎನ್. ಪ್ರಕಾಶ್, ಡಾ. ಮುದುಕಪ್ಪ ಮತ್ತು ಎಂ. ಪರುಶುರಾಂ ಮತ್ತು ವಿದ್ಯಾರ್ಥಿ ಕ್ಷೇಮಾಧಿಕಾರಿ ಎನ್. ನಾಗರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post